Publish Date: Sat, 12 Aug 2023 (17:13 IST)
Updated Date: Sat, 12 Aug 2023 (18:19 IST)
ಆಗಸ್ಟ್ 15 ರಂದು ಮೆಟ್ರೋ ಪ್ರಯಾಣ ದರ 30 ರೂ. BMRCL ನಿಗದಿ ಮಾಡಿದೆ.76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಮ್ಮ ಮೆಟ್ರೋಯಿಂದ ಪೇಪರ್ ಟಿಕೆಟ್ ಪರಿಚಯ ಮಾಡಿದೆ.ಫಲಪುಷ್ಪ ಪ್ರದರ್ಶನ ಹಿನ್ನೆಲೆ ಲಾಲ್ಬಾಗ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂ.ಗೆ ನಿಗದಿಮಾಡಲಾಗಿದೆ.15 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟಿಕೆಟ್ ದರವು 30 ರೂ.ಗೆ ನಿಗದಿಯಾಗಿದೆ. ಪೇಪರ್ ಟಿಕೆಟ್ ಆಗಸ್ಟ್ 15ರಂದು ಮಾತ್ರ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ ಎಂದು BMRCL ಮಾಹಿತಿ ನೀಡಿದೆ.