Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನಿಯ ಏರಿಕೆ

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನಿಯ ಏರಿಕೆ
bangalore , ಬುಧವಾರ, 9 ಆಗಸ್ಟ್ 2023 (21:00 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ದಿನ ನೆಮ್ಮದಿಯಾಗಿ ಹೊರಗಡೆ ಒಡಾಡಿಕೊಂಡು ಬರಬೇಕು ಅಂದ್ರೆ ನಿಮಗೆಲ್ಲ ಗೊತ್ತಿರೋ ಹಾಗೆ ಅದು ಅಸಾಧ್ಯದ ಮಾತು. ಮನೆಯಿಂದ ಹೊರಗೆ ಕಾಲಿಟ್ರೆ ಸಾಕು ಟ್ರಾಫಿಕ್ ಕಿರಿಕಿರಿ ಜನಜಂಗುಳಿ, ದಿನನಿತ್ಯ ವಾಹನ ಸವರರ ಪರದಾಟ. ಖಾಸಗಿ ವಾಹನಗಳಲ್ಲಿ ಹೊಗಬೇಕು ಅಂದ್ರೆ ಹೆಚ್ಚಿನ ಹಣ ವಸುಲಿ ಮಾದ್ತಾರೆ. ಇನ್ನು ಸರ್ಕಾರಿ ಬಸ್ ಗಳಂತು ಕೆಳಗೆಇಲ್ಲ ಇದರ ಮಧ್ಯೆ ಆಫೀಸಿಗೆ ಹೊಗೊರು ಸಿಕ್ಕಾಕೊಂಡ್ರೆ ಅವರ ಪರಸ್ಥಿತಿ ನೋಡೋಕಾಗೋಲ್ಲ. ಇನ್ನೂ ಗಾಡಿ ಪಕ್ಕಕ್ಕೆಹಾಕಿ ನಿಲ್ಲೋಣ ಅಂದ್ರೆ  ನೂರಾರು ರೂಲ್ಸ್ ಗಳು ಹೇಳಿ ಪೊಲೀಸರು ಫೈನ್ ಹಾಕ್ತಾರೆ. ಹೀಗಾಗಿನೆ ಜನ ಇದೆಲ್ಲದರ ಜಂಜಾಟವೆ ಬೇಡವೆ ಬೇಡ ಎಂದು ನಮ್ಮ ಮೆಟ್ರೋ ಕಡೆ ಮುಖ ಮಾಡುತ್ತಿದ್ದಾರೆ. 
 
ಇನ್ನೂ ಕಳೆದ ನಾಲ್ಕು ತಿಂಗಳಿನಲ್ಲಿ ನಮ್ಮ ಮೆಟ್ರೊದ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು. ಜುಲೈ ತಿಂಗಳಿನಲ್ಲಿ ದೈನಂದಿನ ಸರಾಸರಿ 6.11 ಲಕ್ಷ ಮಂದಿ ನಮ್ಮ ಮೆಟ್ರೊದಲ್ಲಿ ಸಂಚರಿಸಿದ್ದಾರೆ. ಜುಲೈನಲ್ಲಿ 17 ದಿನ ಸರಾಸರಿ 6.2 ಲಕ್ಷ ಪ್ರಯಾಣಿಕರು ಮೆಟ್ರೊ ಬಳಕೆ ಮಾಡಿದ್ದು, ಈ ವರ್ಷದ ಜನವರಿಗೆ ಹೋಲಿಕೆ ಮಾಡಿದರೆ ಇದು ಶೇ 16 ರಷ್ಟು ಅಧಿಕವಾಗಿದೆ. ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಒಟ್ಟು ನಾಲ್ಕು ತಿಂಗಳು, ಪ್ರಯಾಣಿಕರ ಸಂಖ್ಯೆ ಈ ಹಿಂದಿನ ತಿಂಗಳಿಗಿಂತ ಹೆಚ್ಚಳವಾಗಿದ್ದು, ಜನರೊಂದಿಗೆ ಕೋಟಿ ಕೋಟಿ ಆದಾಯ ಕೂಡ ಹರಿದು ಬರುತ್ತಿದೆ.  ಇನ್ನೂ ಆಗಸ್ಟ್ ಮಾಸಾಂತ್ಯದಲ್ಲಿ ಕೆ.ಆರ್ ಪುರ ಇಂದ ಬೈಯಪ್ಪನಹಳ್ಳಿಗೆ  2.1 ಕಿ.ಮಿ ಹಾಗೂ ಕೆಂಗೇರಿ ಇಂದ ಚಲ್ಲಘಟ್ಟದವರೆಗೆ 1.9 ಕಿ.ಮಿ ಮಾರ್ಗದ ಕಾಮಗಾರಿ ಮುಕ್ತವಾಗಲಿದ್ದು, ಮುಂದಿನ ದಿನನಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿಕೆಯಾಗುವ ವಿಶ್ವಾಸ ಇದೆ ಎಂದು ಬಿಎಂಆರ್‌ಸಿಎಲ್‌ ಹೇಳಿಕೊಂಡಿದೆ.ಅದೇನೆ ಇರಲಿ ನಮ್ಮ ಮೆಟ್ರೋ ದತ್ತ ಜನ ಮುಖ ಮಾಡುತ್ತಿರುವುದು ಮೆಟ್ರೋಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಸ್ಯಕಾಶಿ ಲಾಲ್ ಬಾಗ್ ನಲ್ಲೇ ಇನ್ಮುಂದೆ ಮಿನಿ ಪಶ್ಚಿಮ ಘಟ್ಟ ಸೊಬಗು