Select Your Language

Notifications

webdunia
webdunia
webdunia
webdunia

ದೆಹಲಿ ಮೆಟ್ರೋದಲ್ಲಿ ಮದ್ಯದ ಬಾಟಲಿ ಕೊಂಡ್ಯೊಯಲು ಇಲಾಖೆಯಿಂದ ಆಕ್ಷೇಪ

ದೆಹಲಿ ಮೆಟ್ರೋದಲ್ಲಿ ಮದ್ಯದ ಬಾಟಲಿ ಕೊಂಡ್ಯೊಯಲು ಇಲಾಖೆಯಿಂದ ಆಕ್ಷೇಪ
ನವದೆಹಲಿ , ಬುಧವಾರ, 26 ಜುಲೈ 2023 (14:31 IST)
ನವದೆಹಲಿ : ದೆಹಲಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಪ್ರಯಾಣದ ವೇಳೆ ಸಾಗಿಸಲು ಅನುಮತಿ ನೀಡಿದ ಡಿಎಂಆರ್ಸಿ ನಿರ್ಧಾರಕ್ಕೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ನಿಯಮ ಬದಲಿಸಲು ಅದು ಸೂಚಿಸಿದೆ. ಅಬಕಾರಿ ಕಾಯ್ದೆಯ ಪ್ರಕಾರ 1 ಸೀಲ್ ಮಾಡಿದ ಮದ್ಯದ ಬಾಟಲಿಯ ರಮ್, ವೋಡ್ಕಾ ಮತ್ತು ವಿಸ್ಕಿಯನ್ನು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಬಹುದು. ಆದರೆ ಮೆಟ್ರೋದಲ್ಲಿ 2 ಬಾಟಲಿ ಸಾಗಿಸಲು ಅನುಮತಿ ನೀಡಿದೆ.

ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ಎನ್ಸಿಆರ್ ನಗರಗಳಾದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ನಡುವೆ ಸಂಚರಿಸುತ್ತಿದೆ. ಇದು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಹಿನ್ನೆಲೆ ರಾಜ್ಯದ ಅಬಕಾರಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿದೆ.

ಅಲ್ಲದೆ ದೆಹಲಿಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಗುರುಗ್ರಾಮದಂತಹ ನಗರಗಳಲ್ಲಿ 18 ವರ್ಷ ವಯಸ್ಸಿನವರಿಗೆ ಮದ್ಯವನ್ನು ಮಾರಾಟ ಮಾಡಬಹುದು. ಮೆಟ್ರೋ ಹೊಸ ನಿಯಮದಿಂದ ಅಪ್ರಾಪ್ತ ವಯಸ್ಕರು ಇತರ ಸ್ಥಳಗಳಿಂದ ಮೆಟ್ರೋ ರೈಲುಗಳ ಮೂಲಕ ಮದ್ಯವನ್ನು ತಂದು ದೆಹಲಿಯಲ್ಲಿ ಸೇವಿಸಬಹುದು ಎಂದು ಅಧಿಕಾರಿಗಳು ಆರೋಪಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಹಿಂದೆ ಬರೆದ ಪೋಸ್ಟ್ ಎಲ್ಲೆಲ್ಲೂ ವೈರಲ್