Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲಿ ಎ ಎಸ್ ಐ ಲಾಂಗ್ ಹಿಡಿದು ಪುಂಡಾಟ

ASI
bangalore , ಶನಿವಾರ, 28 ಅಕ್ಟೋಬರ್ 2023 (14:00 IST)
ಪೊಲೀಸ್ ಅಧಿಕಾರಿಯೇ ಕೈಯಲ್ಲಿ ಮಾರಕಾಸ್ತ್ರ ಹಿಡಿದು ರೌಡಿಸಂಗಿಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 25ರಂದು ರಾತ್ರಿ ವಿಜಯನಗರದ ಆರ್.ಪಿ.ಸಿ ಲೇಔಟ್ 6ನೇ ಮುಖ್ಯರಸ್ತೆಯಲ್ಲಿ ದಯಾನಂದ್ ಹಾಗೂ ಶಶಿಧರ್ ಎಂಬಾತನ ಮೇಲೆ ಮಾಗಡಿ ರಸ್ತೆ ಠಾಣೆಯ ಎಎಸ್‌ಐ ಶ್ರೀನಿವಾಸ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
 ರಾತ್ರಿ 10:30ರ ಸುಮಾರಿಗೆ ಆರ್.ಪಿ.ಸಿ ಲೇಔಟಿನ ತೇಜಸ್ವಿನಿ ಬಾರ್ ನಲ್ಲಿ ಮದ್ಯಪಾನ ಮಾಡುತ್ತಿದ್ದ ದಯಾನಂದ್, ಶಶಿಧರ್ ಎಂಬುವವರನ್ನ ಉದ್ದೇಶಿಸಿ ಆನಂದ್ ಎಂಬಾತ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ. ಇದಕ್ಕೆ ಪ್ರತಿಯಾಗಿ 'ಯಾರು ನೀನು, ನಮ್ಮನ್ನ ಯಾಕೆ ಬೈತಿದ್ದೀಯಾ? ಯಾವ ಏರಿಯಾ ನಿಂದು?' ಎಂದು ಆನಂದ್ ನನ್ನ ದಯಾನಂದ್ ಪ್ರಶ್ನಿಸಿದ್ದ.ನಂದು ಇದೇ ಏರಿಯಾ ಎಂದು ಆನಂದ್ ಉತ್ತರಿಸಿದಾಗ, ನಿನ್ನನ್ನ ಈ ಏರಿಯಾದಲ್ಲಿ ನೋಡಿಲ್ವಲ್ಲ? ಎಂದು ದಯಾನಂದ್ ಪ್ರಶ್ನಿಸಿದಾಗ ಬೇಕಾದ್ರೆ ಬಾ ಮನೆ ತೋರಿಸ್ತಿನಿ ಎಂದಿದ್ದ ಆನಂದ್, ತನ್ನದೇ ಆಟೋದಲ್ಲಿ ಬಲವಂತವಾಗಿ ದಯಾನಂದ್ ಹಾಗೂ ಶಶಿಧರ್ ನನ್ನ ಕೂರಿಸಿಕೊಂಡು ತನ್ನ ಚಿಕ್ಕಪ್ಪ ಎಎಸ್‌ಐ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದ, ನಂತರ ಆಟೋದಿಂದ ಇಳಿದವನೇ ಇಬ್ರು ಕಳ್ಳರು, ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಾಡಲಾರಂಭಿಸಿದ.
 
 ಒಂದು ಕೈಯಲ್ಲಿ ಮಾರಕಾಸ್ತ್ರ, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದ ಶ್ರೀನಿವಾಸ್, ಏನು ಎತ್ತ ಎಂದು ಪ್ರಶ್ನಿಸಿದೆ ನಡು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಲಾರಂಭಿಸಿದ್ದ. ನಂತರ ಅಪ್ಪನ ರೌಡಿಸಂಗೆ ಮಗ ಮತ್ತು ಮಗಳು ಸಹ ಸಾಥ್ ನೀಡಿದ್ದು, ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಹರಿಹಾಯ್ದಿ ಸೋನಿಯಾ ಗಾಂಧಿ