Select Your Language

Notifications

webdunia
webdunia
webdunia
webdunia

ಅಕ್ರಮ ಆಸ್ತಿ : CBI ನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್

ಅಕ್ರಮ ಆಸ್ತಿ : CBI ನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್
ಬೆಂಗಳೂರು , ಶನಿವಾರ, 25 ಫೆಬ್ರವರಿ 2023 (10:42 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಇನ್ನೂ ಒಂದು ವಾರ ರಿಲೀಫ್ ಕೊಟ್ಟಿದೆ.
 
ಡಿಕೆಶಿ ವಿರುದ್ಧ ಸಿಬಿಐ ನಡೆಸುತ್ತಿದ್ದ ತನಿಖೆಗೆ ಈ ಹಿಂದೆ ಕೋರ್ಟ್ ತಡೆ ನೀಡಿತ್ತು. ಅಲ್ಲದೇ ಫೆಬ್ರವರಿ 24ಕ್ಕೆ ಸಿಬಿಐಗೆ ತನಿಖಾ ಪ್ರಗತಿ ವರದಿ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿಕೆಶಿಗೆ ಇನ್ನೂ ಒಂದು ವಾರ ಬಿಡುವು ನೀಡಿದೆ.

ಸಿಬಿಐ ಪರ ವಕೀಲರು ತನಿಖಾ ಪ್ರಗತಿ ವರದಿ ಸಲ್ಲಿಸಿದ ಬಳಿಕ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು. ಈ ವೇಳೆ ಮಧ್ಯಂತರ ತಡೆ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಿಬಿಐ ಮನವಿ ಮಾಡಿತು. ಅದಕ್ಕೆ ಅನುಮತಿ ಕೊಡದ ಹೈಕೋರ್ಟ್ ಮುಂದಿನ ವಿಚಾರಣೆ (ಮಾ.3) ತನಕ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಸೂಚಿಸಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ : ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ