Select Your Language

Notifications

webdunia
webdunia
webdunia
webdunia

CBI ಬಲೆಗೆ MLC ಲೆಕ್ಕ ಪರಿಶೋಧಕ

MLC auditor for cBI trap
ದೆಹಲಿ , ಗುರುವಾರ, 9 ಫೆಬ್ರವರಿ 2023 (14:07 IST)
ದೆಹಲಿ ಅಬಕಾರಿ ನೀತಿ ಹಗರಣ ಪ್ರ ಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಚಾರ್ಟೆಡ್ ಅಕೌಂಟೆಂಟ್​​ನನ್ನು ಕೇಂದ್ರ ತನಿಖಾ ದಳ ಬಂಧಿಸಿದೆ. ತೆಲಂಗಾಣಮುಖ್ಯ ಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, BRSನ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರ ಲೆಕ್ಕ ಪರಿಶೋಧಕ ಬುಚ್ಚಿ ಬಾಬು ಗೊರಂಟ್ಲಾನನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಹಗರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬುಚ್ಚಿ ಬಾಬುಗೆಸೂಚಿಸಲಾಗಿತ್ತು. ಆದರೆ ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಚ್ಚಿ ಬಾಬು ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಮೂಲಗಳು ಹೇಳಿವೆ. 2021-22ರ ದೆಹಲಿ ಅಬಕಾರಿ ಹಗರಣದಲ್ಲಿ ಹೈದರಾಬಾದ್​​​​ ಮೂಲದ ಹೋಲ್ಸೆಲ್ ಹಾಗೂ ರಿಟೇಲ್ ಮತ್ತು ಅದರ ಮಾಲೀಕರಿಗೆ ಬುಚ್ಚಿ ಬಾಬು ಕಾನೂನುಬಾಹಿರವಾಗಿ ಪರವಾನಗಿ ಒದಗಿಸಿದ್ದರು ಎಂದು ಸಿಬಿಐ ಆರೋಪಿಸಿದೆ. ದೆಹಲಿ ಅಬಕಾರಿ ಗುತ್ತಿಗೆ ಹಗರಣದಲ್ಲಿ ಕವಿತಾ ಅವರನ್ನು ಕಳೆದ ವರ್ಷ ಡಿಸೆಂಬರ್​​ನಲ್ಲಿ ಸಿಬಿಐ ವಿಚಾರಣೆಗೊಳಪಡಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಸಿಬ್ಬಂದಿಯನ್ನೇ ಹೊಡೆದು ಕೊಲೆ!