Select Your Language

Notifications

webdunia
webdunia
webdunia
webdunia

ಸಿಬಿಐ ಸೋಗಿನಲ್ಲಿ ಮಹಿಳೆಗೆ ವಂಚನೆ

Cheating on a woman in the guise of CBI
bangalore , ಗುರುವಾರ, 23 ಫೆಬ್ರವರಿ 2023 (19:36 IST)
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಲಕ್ಷ-ಲಕ್ಷ ಮೋಸ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸಹನಾ ಎಂಬ ಮಹಿಳೆಗೆ ವಂಚಿಸಿರುವ ಸೈಬರ್ ಖದೀಮರು, Fedex ಕೋರಿಯರ್  ಮುಂಬೈನಿಂದ ಕರೆ ಮಾಡುತ್ತಿದ್ದೇವೆ ಎಂದಿದ್ದರು. 
ನಿಮ್ಮ ಹೆಸರಲ್ಲಿ  ಥೈವಾನ್ ಗೆ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ. 
ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಮನಿಲ್ಯಾಂಡರಿಗ್ ಮಾಡುತ್ತಿದ್ದಾನೆ. ಹೀಗಾಗಿ ನೀವು ಆರೋಪಿಯಾಗಿದ್ದು, ನಾವು‌ ನಿಮ್ಮನ್ನು ವಿಚಾರಣೆ ಮಾಡಬೇಕಿದೆ ಎಂದು ಬೆದರಿಸಿದ್ದಾರೆ. ನಂತರ ಸ್ಕೈಪ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ ಅಂತಾ ಹೇಳಿ‌ ನಂತರ ಮಹಿಳೆಯನ್ನು ನಂಬಿಸಲು ನಕಲಿ ಅಧಿಕಾರಿಗಳ ಐಡಿ‌ ಕಾರ್ಡ್ ಕಳುಹಿಸಿದ್ದಾರೆ. 
 
ನಿಮ್ಮ ಖಾತೆಯಲ್ಲಿರುವ ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮಗೆ ತೊಂದರೆಯಾಗಿ ತಪ್ಪಿತಸ್ಥರಾಗುತ್ತೀರಿ. ತನಿಖೆಗೆ ನೀವು ಸಹಕರಿಸಬೇಕು, ನೀವು ಈಗ ಆರೋಪಿಯಾಗಿದ್ದೀರಿ ಎಂದು ಬೆದರಿಸಿದ್ದರು.  ಮನಿಲ್ಯಾಂಡರಿಂಗ್ ಕೇಸ್ ಸಂಬಂಧ ನಿಮ್ಮ ಖಾತೆಯ ಮಾಹಿತಿ ನಮಗೆ ಬೇಕಾಗಿದ್ದು, ಅಕೌಂಟಲ್ಲಿರುವ ಹಣವನ್ನು ನಮಗೆ ವರ್ಗಾಯಿಸಿ. ತನಿಖೆ ಮುಗಿದ ನಂತರ ನಿಮ್ಮ ಹಣ ಖಾತೆಗೆ ಜಮೆ ಆಗುತ್ತದೆ ಎಂದಿದ್ದರು. ಹೀಗಾಗಿ ಮಹಿಳೆ ತಮ್ಮ ಖಾತೆಯಲ್ಲಿದ್ದ 5.52 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಇತ್ತ ಖದೀಮರು ತಮ್ಮ ಖಾತೆಗೆ ಹಣ ಜಮೆಯಾದ ತಕ್ಷಣ ಕರೆ ಕಟ್ ಮಾಡಿದ್ದಾರೆ. ಮಹಿಳೆ ಎಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಇದರಿಂದ ತಾನೂ ಮೋಸ  ಹೋದೆ ಎಂಬುದನ್ನು ಅರಿತ ಮಹಿಳೆ ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್​​ವೈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು