ಬೇಲೂರಿನ ಅಂಚೆ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಮಿಥುನ್ ಎಂಬ ಅಂಚೆ ಕಚೇರಿ ನೌಕರ ಆಧಾರ್ ಕಾರ್ಡ್ ಮಾಡಿಕೊಡುವ ನೆಪದಲ್ಲಿ ಹಣ ವಸೂಲಿ ಮಾಡ್ತಿದ್ದ. ಫೋನ್ ನಂಬರ್ ಅಪ್ಡೇಟ್ ಮಾಡಲು 50 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಆದ್ರೆ ಇದರ ಬದಲಾಗಿ 120 ರೂಪಾಯಿಯನ್ನು ವಸೂಲಿ ಮಾಡಲಾಗ್ತಿತ್ತು. ಬಯೊಮೆಟ್ರಿಕ್ ಅಪ್ಡೇಟ್ಗಾಗಿ 100 ರೂಪಾಯಿ ಬದಲಾಗಿ 200 ರೂ. ವಸೂಲಿ ಮಾಡ್ತಿದ್ದ. ಹಣ ವಸೂಲಿ ಮಾಡಿ ಹಣ ಸಂದಾಯ ರಶೀದಿ ನೀಡದೆ ಜನರಿಗೆ ವಂಚನೆ ಮಾಡ್ತಿದ್ನಂತೆ. ಅಧಿಕಾರಿಗೆ ಮುತ್ತಿಗೆ ಹಾಕಿ ಕರವೇ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಸಿದ್ದು, ಈ ವೇಳೆ ಮಾಡಿರೊ ತಪ್ಪನ್ನು ನೌಕರ ಒಪ್ಪಿಕೊಂಡಿದ್ದಾನೆ. ಹಲವು ತಿಂಗಳಿನಿಂದ ಇದೇ ರೀತಿ ಹಣ ವಸೂಲಿ ಮಾಡಲಾಗ್ತಿತ್ತು ಎಂದು ಜನರು ಆರೋಪ ಮಾಡ್ತಿದ್ದಾರೆ. ತಪ್ಪಿತಸ್ಥ ನೌಕರನ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.