Publish Date: Tue, 11 Oct 2022 (13:17 IST)
Updated Date: Tue, 11 Oct 2022 (13:19 IST)
ಹಾವೇರಿ : ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೆ ಕಾಂಗ್ರೆಸ್. ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್ ಗಾಂಧಿಯಾಗಿದ್ದು, ಅದಕ್ಕೋಸ್ಕರ ಬೇಲ್ನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀ ಆಶೀರ್ವಾದ ಪಡೆದು ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೆ ಈ ರಾಹುಲ್ ಗಾಂಧಿಯವರ ತಾತ. ಭಯೋತ್ಪಾದನೆಯ ಇನ್ನೊಂದು ಹೆಸರು ಕಾಂಗ್ರೆಸ್ಸೇ ಆಗಿದೆ ಎಂದರು.
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಮೂಗಿಗೆ ತುಪ್ಪ ಸವರೋ ಕೆಲಸ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಬಹುಮತ ಪಡೆದು ಐದು ವರ್ಷ ಮುಖ್ಯಮಂತ್ರಿ ಆಗಿದ್ದರು.
ಅಷ್ಟೇ ಅಲ್ಲದೇ ಅವರು ಅಹಿಂದ್ ಹೋರಾಟ ಮಾಡಿ ಆ ಕೋಟಾದ ಭೀಕ್ಷೆಯಲ್ಲಿ ಮುಖ್ಯಮಂತ್ರಿ ಆಗಿದ್ದರು. ಆದರೂ ಆಗ ಹಿಂದುಳಿದ ಸಮಾಜಗಳಿಗೆ ನ್ಯಾಯ ಕೊಡದಿದ್ದವರು, ಈಗ ಮೀಸಲಾತಿ ಕೊಟ್ಟಾಗ ಅಸಮಾಧಾನದ ಮಾತನಾಡುತ್ತಾರೆ ಎಂದು ಕಿಡಿಕಾರಿದರು.