Select Your Language

Notifications

webdunia
webdunia
webdunia
webdunia

ವಿಶ್ವ ಬ್ಯಾಂಕ್ ಮೊರೆ ಹೋದ BBMP

ವಿಶ್ವ ಬ್ಯಾಂಕ್ ಮೊರೆ ಹೋದ BBMP
bangalore , ಮಂಗಳವಾರ, 11 ಅಕ್ಟೋಬರ್ 2022 (15:09 IST)
ಬೆಂಗಳೂರು ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಹಾಗೂ ಪ್ರವಾಹ ಸ್ಥಳಗಳ ಅಭಿವೃದ್ಧಿಗೆ BBMP ವಿಶ್ವ ಬ್ಯಾಂಕ್​ ಮೊರೆ ಹೋಗಿದೆ. ಸಿಲಿಕಾನ್ ಸಿಟಿ ಕಳೆದ ತಿಂಗಳು ಸುರಿದ ಭಾರಿ ಮಳೆಗೆ ತತ್ತರಿಸಿ ಹೋಗಿದೆ. ನಗರದ ರಸ್ತೆಗಳಿಗೆ ರಾಜಕಾಲುವೆಗಳ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಬೆಂಗಳೂರಿನ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿತ್ತು‌. ಬ್ರ್ಯಾಂಡ್ ಬೆಂಗಳೂರು ಇಮೇಜ್​ಗೂ ಧಕ್ಕೆ ಉಂಟಾಗಿತ್ತು. ರಾಜ್ಯ ಸರ್ಕಾರ ರಾಜಕಾಲುವೆ ದುರಸ್ತಿಗೆ 1500 ಕೋಟಿ ಅನುದಾನ ನೀಡಿತ್ತು. ಆದರೆ BBMP ‌‌1500 ಕೋಟಿ ರಾಜಕಾಲುವೆ ದುರಸ್ತಿಗೆ ಸಾಕಾಗೋದಿಲ್ಲ ಅಂತಿದ್ದಾರೆ. ವಿಶ್ವ ಬ್ಯಾಂಕ್ ಬಳಿ 2000 ಕೋಟಿ ಅನುದಾನಕ್ಕೆ ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ. ವಿಶ್ವಬ್ಯಾಂಕ್ ತಂಡ ವಾತಾವರಣ ಸ್ಥಿತಿಸ್ಥಾಪಕತ್ವ ಅಧ್ಯಯನಕ್ಕೆ ಆಗಮಿಸಿದೆ. ವಿಶ್ವಬ್ಯಾಂಕ್ ಪ್ರತಿನಿಧಿಗಳು ಪ್ರವಾಹ ಪೀಡಿತ ಪ್ರದೇಶಗಳ ತಪಾಸಣೆ ನಡೆಸುತ್ತಿದ್ದಾರೆ. BBMP ರಾಜಕಾಲುವೆ ಅಭಿವೃದ್ಧಿ, ಕೆರೆ ನೀರಿನ ಸಮರ್ಪಕ ಬಳಕೆಗೆ ಪ್ಲ್ಯಾನ್ ಮಾಡಿದೆ. ವಿಶ್ವ ಬ್ಯಾಂಕ್ ಅನುದಾನದ ನೆರವಿನಿಂದ ಮಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಾಗಿ ರಸ್ತೆಗೆ ಇಳಿದು ಬಂದ ಮೋದಿ