Publish Date: Fri, 30 Sep 2022 (15:02 IST)
Updated Date: Fri, 30 Sep 2022 (15:07 IST)
ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ಹಿನ್ನೆಲೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ ಮೀಸಲಾತಿ ಪಟ್ಟಿಗೂ ನಮಗೂ ಸಂಬಂಧ ಇಲ್ಲ, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರೋದು. ಹೀಗಾಗಿ ಎಲೆಕ್ಷನ್ ನಡೆಸೋದಕ್ಕೆ ನಾವು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೆವೆ. ಚುನಾವಣಾ ಆಯೋಗ ಯಾವಾಗ ರೆಡಿ ಅಂದರೆ ನಾವು ಸಿದ್ದ ಎಂದು ಹೇಳಿದ್ಧಾರ. ತುಷಾರ್ ಗಿರಿನಾಥ್ ಅವರು ವಾರ್ಡ್ ವಿಂಗಡಣೆ ಬಗ್ಗೆ ತಕರಾರು ಎತ್ತಿ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಕೋರ್ಟ್ ಅರ್ಜಿಯನ್ನ ವಜಾ ಮಾಡಿದೆ. ಈಗ ಇರುವುದು ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರವಾಗಿದೆ. ಮತದಾರರ ಪಟ್ಟಿಯನ್ನು ಕೂಡ ಅಂತಿಮಗೊಳಿಸಿ ಪ್ರಕಟಿಸಿದ್ದೆವೆ. ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯಾದಂತಹ ಗೊಂದಲ ಇಲ್ಲ, 2011ರ ಜನಗಣತಿ ಪ್ರಕಾರನೇ ಮತದಾರ ಪಟ್ಟಿಯನ್ನ ಅಂತಿಮಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೆವೆ ಎಂದು ಹೇಳಿದ್ಧಾರೆ.