Select Your Language

Notifications

webdunia
webdunia
webdunia
webdunia

ಸುಮ್ಮನಹಳ್ಳಿ ಫ್ಲೈ ಓವರ್ ಬಿರುಕು ಬಿಟ್ಟ ಸ್ಥಳಕ್ಕೆ ಬಿಬಿಎಂಪಿ‌ ಅಧಿಕಾರಿ ಭೇಟಿ

BBMP official visited the place where Summanahalli flyover was cracked
bangalore , ಬುಧವಾರ, 21 ಸೆಪ್ಟಂಬರ್ 2022 (21:25 IST)
ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಬಿರುಕು ಬಿಟ್ಟ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು,BBMP ಅಧಿಕಾರಿಗಳು ಗುಂಡಿಬಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.
 
ರಾಜರಾಜೇಶ್ವರಿ ವಲಯದ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದು, ಮೇಜರ್ ರೋಡ್ ವಿಭಾಗದ EE ಬಾಲಾಜಿ, SE ರಾಜೇಶ್ ರವರಿಂದ ಪರಿಶೀಲನೆ ಮಾಡಿದ್ದಾರೆ. ಇಂದು ರಾತ್ರಿ 10 ಗಂಟೆ ನಂತರ ದುರಸ್ಥಿ ಕಾರ್ಯ ಆರಂಭ ನಡೆಯಲಿದೆ. 3 ವರ್ಷಗಳ ಹಿಂದೆ ಕಾಂಕ್ರೀಟ್ ಹಾಗೂ ಸ್ಲ್ಯಾಬ್ ಸಡಿಲಿಕೆ ಮಾಡಲಾಗಿತ್ತು. ಸ್ಟ್ರಕ್ಚರ್ ಹಾಗೂ ಪಿಲ್ಲರ್​​ನಲ್ಲಿ ಯಾವುದೇ ಸಮಸ್ಯೆ ಇಲ್ಲ. ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ. ಸಂಜೆ ವೇಳೆಗೆ ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆನಂತರ ದುರಸ್ಥಿ ಕಾರ್ಯ ಶುರುವಾಗುತ್ತೆ ಎಂದು ಬಿಬಿಎಂಪಿ EE ಬಾಲಾಜಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡ್ ರಿಕವರಿ ಗೆ ಬಂದ ಪೊಲೀಸರಿಗೆ ದಿಗ್ಭಂದನ