Select Your Language

Notifications

webdunia
webdunia
webdunia
Thursday, 3 April 2025
webdunia

ಮನೆ ಮುಂದೆ ಕಾರು ನಿಲ್ಲಿಸಲ್ಲು ಶುಲ್ಕ ಬಿಬಿಎಂಪಿ ಹೊಸ ಪ್ಲಾನ್

Crime
ಬೆಂಗಳೂರು , ಬುಧವಾರ, 21 ಸೆಪ್ಟಂಬರ್ 2022 (16:47 IST)
ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್ ನೀತಿ 2.0 ಜಾರಿಗೆ ತರಲು ತೀರ್ಮಾನಿಸಿರುವುದರ ಜತೆಗೆ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ
.ಪಾರ್ಕಿಂಗ್ ನೀತಿ ಜಾರಿಯಾದರೆ, ಮನೆ ಮಾಲೀಕರು ತಮ್ಮ ವಾಹನಗಳನ್ನು ಮನೆ ಮುಂದೆ ಪಾರ್ಕಿಂಗ್ ಮಾಡುವಂತಿಲ್ಲ. ಇನ್ನು ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಬೇಕಾದರೂ ಹಣ ಪಾವತಿಸುವುದು ಅನಿವಾರ್ಯವಾಗಲಿದೆ.
 
ತಮ್ಮ ಮನೆಗಳಲ್ಲಿ ಕಾರ್ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದಿದ್ದರೆ ಸಾರ್ವಜನಿಕರು 3 ರಿಂದ 5 ಸಾವಿರ ಹಣ ಕೊಟ್ಟು ರಸ್ತೆ ಬದಿ ವಾಹನ ನಿಲ್ಲಿಸಲು ಪರವಾನಿಗಿ ಪಡೆಯಬೇಕಾಗುತ್ತದೆ. ಒಟ್ಟಾರೆ ಹೊಸ ಪಾರ್ಕಿಂಗ್ ನೀತಿ ಜಾರಿಯಾದರೆ ನಗರದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳ ಪಾರ್ಕಿಂಗ್‍ಗೂ ಹಣ ವ್ಯಯಿಸುವಂತಾಗಲಿದೆ.
 
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ನಗರದ ಎಂಟು ವಲಯಗಳಲ್ಲೂ ಹೊಸ ಪಾರ್ಕಿಂಗ್ ನೀತಿ ಜಾರಿಗಾಗಿ ಈಗಾಗಲೇ ಬಿಬಿಎಂಪಿ ಟೆಂಡರ್ ಕರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸಚಿವರೊಬ್ಬರ ಬಂಡವಾಳ ಬಯಲು