Select Your Language

Notifications

webdunia
webdunia
webdunia
webdunia

ಫುಡ್ ಡೆಲಿವರಿ ನೆಪದಲ್ಲಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ !

ಫುಡ್ ಡೆಲಿವರಿ ನೆಪದಲ್ಲಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ !
ಮುಂಬೈ , ಬುಧವಾರ, 21 ಸೆಪ್ಟಂಬರ್ 2022 (08:57 IST)
ಮುಂಬೈ : 19 ವರ್ಷದ ಯುವತಿಗೆ ಬಲವಂತವಾಗಿ ಚುಂಬಿಸಿದ 42 ವರ್ಷದ ಫುಡ್ ಡೆಲಿವರಿ ಏಜೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಪುಣೆಯ ಯೆವಾಲೆವಾಡಿಯಲ್ಲಿ ಯುವತಿಯೊಬ್ಬಳೆ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸಂಬಂಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದು, ಶನಿವಾರ ಫುಡ್ ಆರ್ಡರ್ ಮಾಡಿರುವುದಾಗಿ ಬಹಿರಂಗಪಡಿಸಿದ್ದಾಳೆ. 

ಫುಡ್ ಡೆಲಿವರಿ ಮಾಡಲೆಂದು ಮನೆಗೆ ಬಂದ ಡೆಲಿವರಿ ಏಜೆಂಟ್ ಒಂದು ಗ್ಲಾಸ್ ನೀರು ನೀಡುವಂತೆ ಕೇಳಿದ್ದಾನೆ. ನಂತರ ಆರೋಪಿ ಮನೆಗೆ ಬಂದಿದ್ದಾನೆ. ಬಳಿಕ ಯುವತಿಯೊಂದಿಗೆ ಸ್ನೇಹದಿಂದ ಮಾತನಾಡಲು ಆರಂಭಿಸಿ ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ವಿಚಾರಿಸಿದ್ದಾನೆ. 

ಈ ವೇಳೆ ಯುವತಿ ತಾನು ತನ್ನ ರೂಮ್ಮೇಟ್ಗಳೊಂದಿಗೆ ವಾಸಿಸುತ್ತಿದ್ದೇನೆ ಆದರೆ ಅವರು ಪ್ರಸ್ತುತ ಮನೆಯಲ್ಲಿಲ್ಲ ಎಂದು ಹೇಳಿದಾಗ ಈ ಪರಿಸ್ಥಿತಿಯನ್ನೇ ಲಾಭವಾಗಿ ಮಾಡಿಕೊಂಡು ನೀರು ತರಲು ಯುವತಿಯನ್ನು ಕೇಳಿದ್ದಾನೆ.

ಆಹ ಯುವತಿ ನೀರು ತರಲು ತಿರುಗುತ್ತಿದ್ದಂತೆಯೇ ಆರೋಪಿ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ. ನಂತರ ಮನೆಯಿಂದ ಹೊರಡುವ ಮುನ್ನ ಆರೋಪಿ, ನಾನು ನಿನ್ನ ಚಿಕ್ಕಪ್ಪನಿದ್ದಂತೆ ಎಂದು ಹೇಳಿ ಬೇಕಿದ್ದರೆ ತನ್ನನ್ನು ಸಂಪರ್ಕಿಸುವಂತೆ ಹೇಳಿದ್ದಾನೆ.

ಆರಂಭದಲ್ಲಿ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ಯಾವಾಗ ಆತ ಆಕೆಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಲು ಆರಂಭಿಸಿದನೋ ಆಗ ಯುವತಿ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಊಟ ಸೇವಿಸಿದ ಬಳಿಕ 31 ವಿದ್ಯಾರ್ಥಿಗಳು ಅಸ್ವಸ್ಥ!