Publish Date: Fri, 30 Sep 2022 (15:43 IST)
Updated Date: Fri, 30 Sep 2022 (15:46 IST)
ಬಿಬಿಎಂಪಿ ಚುನಾವಣೆ ವಿಚಾರವಾಗಿ ಹೈಕೋರ್ಟ್ ಆದೇಶ ಸ್ವಾಗತರ್ಹವಾಗಿದೆ ಎಂದು ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹೇಳಿದ್ದಾರೆ.
ಬಿ.ಬಿ.ಎಂ.ಪಿ.ಚುನಾವಣೆ ಮೀಸಲಾತಿ ಪಟ್ಟಿ ನವಂಬರ್ 30ಅಂತಿಮಗೊಳಿಸಿ,ಡಿಸೆಂಬರ್ ನಲ್ಲಿ ಬಿ.ಬಿ.ಎಂ.ಪಿ.ಚುನಾವಣೆ ಮಾಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಕೊಟ್ಟಿದೆ.ಹೈಕೋರ್ಟ್ ಆದೇಶವನ್ನು ನಮ್ಮ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತಿದೆ.ಕಾಂಗ್ರೆಸ್ ಪಕ್ಷ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ದವಾಗಿದೆ.ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಯಬೇಕು ಎಂದು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಹೇಳಿದಾರೆ.