Publish Date: Tue, 11 Oct 2022 (14:57 IST)
Updated Date: Tue, 11 Oct 2022 (15:08 IST)
ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜ್ಯ ಗುಜರಾತ್ಗೆ ನಿನ್ನೆ ತೆರಳಿದ್ರು. ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ ಬೃಹತ್ ಡ್ರಗ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ರು. ನಂತರ ಅವರು ಅಲ್ಲಿನ ಕಾರಿನಲ್ಲಿ ತೆರಳಿದ್ರು. ಈ ಸಂದರ್ಭದಲ್ಲಿ ಮೋದಿಗಾಗಿ ಅಭಿಮಾನಿಯೋರ್ವ ರಸ್ತೆಯಲ್ಲಿ ನಿಂತಿದ್ರು. ಇದನ್ನು ಗಮನಿಸಿದ ನರೇಂದ್ರ ಮೋದಿ ಕಾರಿನಿಂದ ಇಳಿದು ಅಭಿಮಾನಿಯನ್ನು ಕೈ ಮುಗಿದು ಸ್ವಾಗತಿಸಿ ಆಟೋಗ್ರಾಫ್ ನೀಡಿದ್ರು. ದೇಶದ ಪ್ರಧಾನಿಯಾಗಿದ್ರು ಸಹ ಸಾಮಾನ್ಯರಂತೆ ರಸ್ತೆಗೆ ಇಳಿದು ಬಂದಿದ್ದು, ಮೋದಿಯ ಸರಳ ವ್ಯಕ್ತಿತ್ವದ ಅನಾವರಣವಾಗಿತ್ತು. ಮೋದಿ ಅಭಿಮಾನಿ ಮೋದಿ ತಮ್ಮ ತಾಯಿಯೊಂದಿಗೆ ಇರುವ, ತಾಯಿಗೆ ನಮಸ್ಕರಿಸುವ ಫೋಟೋ ಹಿಡಿದು ನಿಂತಿದ್ದು, ಆ ಫೋಟೋ ಮೇಲೆ ತಮ್ಮ ಹಸ್ತಾಕ್ಷರ ಬರೆದ್ರು.