ಶಿವಮೊಗ್ಗ: ಬಾಂಗ್ಲಾದೇಶದ ಈಗೀನ ಪರಿಸ್ಥಿತಿ ನೋಡಿದಾಗ ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು.
ಅವರು ಇಂದು ನಗರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು. ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಕೀಲರು ಸಾಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಭಾರತದ ಹಿಂದೂಗಳು ಈ ದೇಶದ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ ಎಂದು ಪ್ರಶ್ನಿಸಿದರು. ಮುಸ್ಲಿಮರು ಹಿಂದೂ ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಆದರೆ ಒಬ್ಬ ಹಿಂದೂ ಸಹ ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮ ಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೆ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಹಿಂದೂಗಳು ಶಾಂತಿಪ್ರಿಯರು ಎಂದರು.
ಬಾಂಗ್ಲಾದಲ್ಲಿ ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡುತ್ತಿದ್ದಾರೆ. ಈ ರೀತಿಯೇ ಮುಂದುವದರೆ ಬಾಂಗ್ಲಾದೇಶ, ಪಾಕಿಸ್ತಾನ ಮುಂದೊಂದು ದಿನ ಇರಲ್ಲ. ಅದು ಅಖಂಡ ಭಾರತ ಆಗುತ್ತದೆ. ಇಂದು ಸಾಧು ಸಂತರು ಹೋರಾಟಕ್ಕೆ ಬಂದಿದ್ದಾರೆ. ಅಖಂಡ ಭಾರತದ ನಿರ್ಮಾಣಕ್ಕೆ ಸಾಧು ಸಂತರ ನೇತೃತ್ವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.