ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 11ರ ಶೋನಿಂದ ಸ್ಪರ್ಧಿ ಚೈತ್ರಾ ಕುಂದಾಪುರ ಹೊರಬಂದಿದ್ದಾರೆ. ಈ ಹಿಂದೆ ಅವರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿಎಂಎಂ ಕೋರ್ಟ್ ಮುಂದೆ ಚೈತ್ರಾ ಹಾಜರಾಗಿದ್ದಾರೆ.
ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ₹ 5 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಬಿಗ್ ಬಾಸ್‌ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಅಟೆಂಡ್ ಆಗಿದ್ದಾರೆ.
ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ.
ಇನ್ನೂ ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಈ ಹಿಂದೆ ವರ್ತೂರು ಸಂತೋಷ್ ಅವರು ಒಂದು ವಾರಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಆ ನಂತರ ಬಿಗ್ ಬಾಸ್‌ಗೆ ಬಂದಿದ್ದರು. ಅದೇ ರೀತಿ ಇದೀಗ ಮತ್ತೆ ಚೈತ್ರಾ ಕೂಡ ಬಿಗ್ ಬಾಸ್‌ಗೆ ಹೋಗ್ತಾರಾ? ಎಂದು ಕಾದುನೋಡಬೇಕಿದೆ.
ಉದ್ಯಮಿ ಗೋವಿಂದ ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮತ್ತು ಆಕೆಯ ತಂಡ ₹ 5 ಕೋಟಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಿಸಿ, ಆಕೆಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದರು.