Select Your Language

Notifications

webdunia
webdunia
webdunia
webdunia

ಹಿಂದೂ ಪರ ವ್ಯಕ್ತಿಗೆ ಮತ ಹಾಕಿ, ಇಲ್ಲದಿದ್ದರೆ ಬಾಂಗ್ಲಾ, ಪಾಕ್‌ ಪರಿಸ್ಥಿತಿ ಬರುತ್ತದೆ : ಕೆಎಸ್ ಈಶ್ವರಪ್ಪ

Karnataka By Election 2024, EX DCM KS Eshwarappa, Karnataka Congress Government,

Sampriya

ಶಿವಮೊಗ್ಗ , ಬುಧವಾರ, 13 ನವೆಂಬರ್ 2024 (15:14 IST)
Photo Courtesy X
ಶಿವಮೊಗ್ಗ: ಹಿಂದೂಗಳ ಪರವಾಗಿ ಇರುವ ಸ್ಪರ್ಧಿಗೆ ಮತ ಹಾಕಿ ಗೆಲ್ಲಿಸಿ. ಇಲ್ಲದಿದ್ದರೆ ಮುಂದೆ  ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಮಾಡುತ್ತಿರುವ ಅಚಾತುರ್ಯವನ್ನು ನೋಡಿಯು ಕಾಂಗ್ರೆಸ್ ಸರ್ಕಾರ ಸುಮ್ಮನಾಗಿದೆ. ಪ್ರತಿನಿತ್ಯ ಮುಸ್ಲಿಮರ ಒಂದಲ್ಲ ಒಂದು ಅನ್ಯಾಯ ಕಾಣುತ್ತಿದೆ. ರೈತರು, ದೇವಸ್ಥಾನ, ಸಾಧು ಸಂತರು, ಪುರಾತತ್ವ ಇಲಾಖೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ಇದುವರೆಗೂ ಕಾಂಗ್ರೆಸ್ ನಾಯಕರ ಬಾಯಲ್ಲಿ ವಕ್ಫ್ ಆಸ್ತಿ ಆಗಲು ಬಿಡಲ್ಲ ಎಂದು  ಬಂದಿಲ್ಲ. ಹಿಂದೂಗಳ ಪರವಾಗಿ ಇರುವವರಿಗೆ ಮತ ಹಾಕದಿದ್ದರೆ,ಪಾಕಿಸ್ತಾನ, ಬಾಂಗ್ಲಾದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಕ್ಫ್ ನೋಟಿಸ್ ವಾಪಸ್ ತೆಗೆದುಗೊಂಡಿದ್ದೇವೆ ಎಂದು ಹೇಳುತ್ತಾರೆ ಆದರೆ ಸಿಎಂ, ಡಿಸಿಎಂ ಈ ಬಗ್ಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ವಿಪಕ್ಷಗಳು ರಾಜಕಾರಣ ಮಾಡುತ್ತೇವೆ ಎಂದು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ಧರಿದ್ದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾನೆ. ಆದರೆ ಈ ನಾಯಕ ಹೇಳಿಕೆಯನ್ನು ಒಬ್ಬ ಕಾಂಗ್ರೆಸ್ ನಾಯಕನೂ ಖಂಡಿಸಿಲ್ಲ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯವರೇ ನಾನು ರಾಜಕೀಯ ನಿವೃತ್ತಿ ತಗೊತೀನಿ, ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ