Publish Date: Wed, 13 Dec 2017 (16:24 IST)
Updated Date: Wed, 13 Dec 2017 (16:26 IST)
ರಾಜ್ಯದಲ್ಲಿ ಕೋಮುಗಲಭೆಗಳಿಗೆ ಬಿಜೆಪಿಯವರೇ ಕಾರಣ. ಬಿಜೆಪಿಯವರು ಮನೆಯಲ್ಲಿದ್ದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರುತ್ತದೆ. ಜೊತೆಗೆ ರಾಜ್ಯವೂ ಶಾಂತಿವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.
ಬೀದರ್‍ನ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ನಡೆದಿರುವ ಗಲಾಟೆಗೆ ಹಾಗೂ ಕೋಮು ಗಲಭೆಗಳು ನಡೆಯಬೇಕಾದರೆ ಬಿಜೆಪಿಯವರೇ ಕಾರಣರಾಗಿದ್ದಾರೆ. ಅವರು ಬರೀ ಸುಳ್ಳು ಹೇಳುತ್ತಾರೆ. ಜನರನ್ನು ಭಾವಾನಾತ್ಮಕವಾಗಿ
ಕೆರಳಿಸುವುದು ಬಿಟ್ಟರೆ ರಾಜ್ಯ ಶಾಂತವಾಗಿರುತ್ತದೆ ಎಂದು ನುಡಿದ್ದಾರೆ.
ಬೆಂಕಿ ಹಚ್ಚುವವರು ಅವರೇ, ಕೋಮು ಗಲಭೆ ಸೃಷ್ಠಿ ಮಾಡುವವರು ಕೂಡ ಬಿಜೆಪಿಯವರೆ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.