Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ಹಿಂದೂ ಸಂಘಟನೆ ಎಂದರೆ ಅಲರ್ಜಿ- ಸಿ.ಟಿ.ರವಿ

ಸಿದ್ದರಾಮಯ್ಯಗೆ ಹಿಂದೂ ಸಂಘಟನೆ ಎಂದರೆ ಅಲರ್ಜಿ- ಸಿ.ಟಿ.ರವಿ
ರಾಯಚೂರು , ಬುಧವಾರ, 13 ಡಿಸೆಂಬರ್ 2017 (14:35 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಘಟನೆಯೆಂದರೆ ಅಲರ್ಜಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಯಚೂರಿಗೆ ಬಂದಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೂ ಸಂಘಟನೆ ಎಂದರೆ ಸಿದ್ದರಾಮಯ್ಯ ಅವರಿಗೆ ಅಲರ್ಜಿ. ಆದ್ದರಿಂದ ರಾಜ್ಯದಲ್ಲಿ ಇಷ್ಟೆಲ್ಲಾ ಗಲಾಟೆಗಳಿಗೆ ಮುಖ್ಯಮಂತ್ರಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಹುಣಸೂರಿನಲ್ಲಿ ಹನುಮ ಜಯಂತಿಗೆ ಅನುಮತಿ ನೀಡಿದ್ದರೆ ಅಲ‍್ಲಿಯೂ ಗಲಾಟೆ ನಡೆಯುತ್ತಿರಲಿಲ್ಲ. ಸಂಸದ ಪ್ರತಾಪಸಿಂಹ ಅವರ ಬಂಧನವೂ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್‍‍ ವ್ಯವಹಾರದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಗೃಹ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಇಲಾಖೆಯ ಮೇಲೆ ಅವರಿಗೆ ಹಿಡಿತವೇ ಇಲ್ಲವಾಗಿದ್ದು, ಪರೇಶ್ ಹತ್ಯೆ ಪ್ರಕರಣದ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ. ಕೂಡಲೇ ಪರೇಶ್ ಮೇಸ್ತಾ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ಎನ್‍‍ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
 
ಪಿಎಫ್‍‍ಐ ಹಾಗೂ ಎಸ್‍‍ಡಿಪಿಐ ಸಂಘಟನೆಗಳು ಹಿಂದೂ ಯುವರಕ ಕೊಲೆಯಲ್ಲಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯನ ಹಿಟ್ಲರ್ ವರ್ತನೆಯಿಂದ ಕಾಂಗ್ರೆಸ್‍‍ಗೆ ಮುಳುವು- ವರ್ತೂರು ಪ್ರಕಾಶ