Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಗೆ ಕಿರಿಕ್ ಹುಡುಗಿಯ ಎಂಟ್ರಿ

ಬಿಗ್ ಬಾಸ್ ಮನೆಗೆ ಕಿರಿಕ್ ಹುಡುಗಿಯ ಎಂಟ್ರಿ

ರಾಮಕೃಷ್ಣ ಪುರಾಣಿಕ

ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (13:14 IST)
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನದಲ್ಲಿ ಹೆಸರು ಮಾಡಿದ್ದ ಸಂಯುಕ್ತ ಹೆಗ್ಡೆ ಇದೀಗ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ತಕ್ಷಣವೇ ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸನ್ ಅವರಿಗೆ ಸಂಖ್ಯಾಶಾಸ್ತ್ರಜ್ಞದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ವ್ಯಕ್ತಿಪಡಿಸುವ ಮೂಲಕ ಅವರಿಗೆ ಶಾಕ್ ನೀಡಿದ್ದಲ್ಲದೇ, ನಿವೇದಿತಾ ಗೌಡ ಅವರಿಗೆ ನೀವು ಚಾಣಾಕ್ಷರಾಗಿ ಆಡುತ್ತಿರುವಿರಿ ಹಾಗೂ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಿರುವಿರಿ ಎಂದು ಹೇಳಿದ್ದಾರೆ.
 
ಕಾಲೇಜ್ ಕುಮಾರ ಚಿತ್ರದಲ್ಲಿ ಅಭಿನಯಿಸಿದ ಕಿರಿಕ್ ಹುಡುಗಿ ಕೆಲವು ದಿನಗಳಿಗೆ ಮಾತ್ರ ಎಂಟ್ರಿ ಕೊಟ್ಟಿದ್ದಾರೆ, ಆದರೆ ಉಳಿದ ಸ್ಪರ್ಧಾಳುಗಳ ದೃಷ್ಟಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದಾರೆ. ಅವರೊಂದಿಗೆ ಅವರ ಸ್ನೇಹಿತೆ "ಅಸತೋಮ ಸದ್ಗಮಯ" ಮತ್ತು "ಅಂಬಿ ನಿನಗೆ ವಯಸ್ಸಾಯ್ತೋ" ಚಿತ್ರದಲ್ಲಿ ಅಭಿನಯಿಸಿದ ಲಾಸ್ಯ ನಾಗ್ ಅವರು ಸಂಪೂರ್ಣ ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಜಯಶ್ರೀನಿವಾಸನ್ ರಿಯಾಜ್ ಮೇಲೆ ಉರಿದು ಬಿದ್ದಿದ್ದು ಯಾಕೆ?