Publish Date: Sat, 25 Nov 2017 (06:55 IST)
Updated Date: Sat, 25 Nov 2017 (07:03 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ನಿವೇದಿತಾ ಮೇಲೆ ಸಿಹಿಕಹಿ ಚಂದ್ರು ಸಿಟ್ಟುಗೊಂಡಿದ್ದಾರೆ. ನಿವೇದಿತಾ ಗೌಡ ಕ್ಯಾಪ್ಟನ್ ಶಿಪ್ ಸರಿಯಾಗಿ ನಡೆಸುತ್ತಿಲ್ಲ ಎಂಬುದು ಚಂದ್ರು ಅವರ ಕೋಪಕ್ಕೆ ಕಾರಣ.
ದಿವಾಕರ್ ಅವರು ಬೆಳಿಗ್ಗೆ ಟಾಸ್ಕ್ ಗೆ ರೆಡಿಯಾಗದೇ ಬಟ್ಟೆಗಳನ್ನು ಒಗೆಯುತ್ತಿದ್ದರು. ಇದರಿಂದ ಜಗನ್ ಹಾಗೂ ಚಂದ್ರು ಅವರು ಕೋಪಗೊಂಡು ಮೂವರ ನಡುವೆ ಜಗಳ ಶುರುವಾಯಿತು. ಆಗ ಚಂದ್ರು ಕೋಪದಿಂದ ನಿವೇದಿತಾ ಬಳಿ ಬಂದು ಕ್ಯಾಪ್ಟನ್ ಆಗಿರುವ ನೀವು ಎಲ್ಲರಿಗೂ ಬೇಗ ಟಾಸ್ಕ್ ಗೆ ತಯಾರಾಗುವಂತೆ ಸೂಚಿಸಬೇಕು, ಯಾಕೆ ಹಾಗೇ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದರಿಂದ ಕೋಪಗೊಂಡ ನಿವೇದಿತಾ ಗೌಡ ಕ್ಯಾಪ್ಟನ್ ಆದ ಮಾತ್ರಕ್ಕೆ ಎಲ್ಲರಿಗೂ ಊಟ, ತಿಂಡಿ, ನಿದ್ರೆ ಎಲ್ಲಾ ಮಾಡಿಸೋಕೆ ಆಗುತ್ತಾ…? ಎಲ್ಲರೂ ಜವಾಬ್ದಾರಿಯಿಂದ ಟಾಸ್ಕ್ ಗೆ ತಯಾರಾಗಬೇಕೆಂದು ಪ್ರತ್ಯುತ್ತರ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.