Select Your Language

Notifications

webdunia
webdunia
webdunia
webdunia

ಬಿುಗ್‌ಬಾಸ್ ಅವಾಂತರ: ಮತ್ತೆ ಅತ್ತಳಾ ನಿವೇದಿತಾ…?

ಬಿುಗ್‌ಬಾಸ್ ಅವಾಂತರ: ಮತ್ತೆ ಅತ್ತಳಾ ನಿವೇದಿತಾ…?
ಬೆಂಗಳೂರು , ಗುರುವಾರ, 23 ನವೆಂಬರ್ 2017 (08:31 IST)
ಬೆಂಗಳೂರು: ಬಿಗ್ ಬಾಸ್ ಈಗ ಶಾಲೆಯಾಗಿದೆ! ಅರೆ ಇದೇನಪ್ಪಾ ಎಂದು ಆಶ್ಚರ್ಯಪಡಬೇಡಿ. ಈ ಬಾರಿಯ ಲಕ್ಸುರಿ ಬಜೆಟ್ ಟಾಸ್ಕ್ನಲ್ಲಿ ಮನೆಯು
ಶಾಲೆಯ ವಾತಾವರಣ ಪಡೆದಿದೆ.. ಸದಸ್ಯರೆಲ್ಲಾ ವಿದ್ಯಾರ್ಥಿಗಳಂತೆ  ಇದ್ದಾರೆ. ಇನ್ನು ಈಗಾಗಲೇ ಶಿಕ್ಷಕರಾಗಿ ಆಗಮಿಸಿದ್ದ ಕೀರ್ತಿಕುಮಾರ್ ಮನೆಯಿಂದ ಹೋಗಿದ್ದಾರೆ.


ಇನ್ನು ಕಳೆದ ಸೀಸನ್ ನ ಸ್ಪರ್ಧಿಯಾಗಿದ್ದ ಶಾಲಿನಿ ಅವರು ಟೀಚರ್ ಆಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ವಿದ್ಯಾರ್ಥಿಗಳಾಗಿರುವ ಮನೆಯ ಸದಸ್ಯರಿಗೆ ಪಾಠ ಶುರುಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರು ಮಕ್ಕಳಂತೆ ಕೂತು ಡ್ರಾಯಿಂಗ್ ಮಾಡಿದ್ದಾರೆ. ತಮ್ಮ ತಮ್ಮ ಕಲ್ಪನೆಯ ಮೂಲಕ ಸದಸ್ಯರೆಲ್ಲರ ವ್ಯಕ್ತಿತ್ವದ  ಚಿತ್ರಣವನ್ನು ಕಟ್ಟಿಕೊಟ್ಟರು.
 ಸದಾ ಬಿಲ್ಡಪ್ ಕೊಡುವ ಜಗನ್ ಚಂದ್ರ ತಲೆಯ ಮೇಲೆ ಬಣ್ಣ ಬಳಿದರು. ಇನ್ನುಶ್ರುತಿ ಅವರನ್ನು ಚಂದನ್ ಬೆಕ್ಕಿನ ರೀತಿ ಚಿತ್ರಿಸಿದ್ದಾರೆ. ಕಾರ್ತಿಕ್ ಅವರು ಅನುಪಮಾ ಅವರಿಗೆ ಹುಲಿಯ ಚಿತ್ರಣ ನೀಡಿದ್ದಾರೆ. ಟೀಚರ್ ಶಾಲಿನಿ ಅವರಿಂದ ಮೆಚ್ಚುಗೆ ಪಡೆದಿದ್ದು ಚಂದನ್ ಮತ್ತು ಸಮೀರಾಚಾರ್ಯ ಅವರು ರಚಿಸಿದ್ದ ಚಿತ್ರಗಳು. ಟೀಚರ್ ನೀಡಿದ ಚಟುವಟಿಕೆಯಲ್ಲಿ ಸಮೀರಾಚಾರ್ಯರು ಪಾಸ್ ಆಗಿ ಬಹುಮಾನದ ರೂಪವಾಗಿ ಮೆಡಲ್ ಗಿಟ್ಟಿಸಿಕೊಂಡಿದ್ದಾರೆ.

ತನ್ನ ಮಾತಿನ ಮೂಲಕವೇ ಎಲ್ಲರಿಗೂ ಪರಿಚಿತರಾದ ಕ್ಯಾಪ್ಟನ್ ನಿವೇದಿತಾ ಅವರು ತನಗೆ ನಾನ್ ಸೆನ್ಸ್ ಎಂದಿದ್ದಾರೆ ಎಂದು ದಿವಾಕರ್ ಕೂಗಾಡಿದ್ದಾರೆ. ತಾನು ಹಾಗೇನೂ ಹೇಳೆ ಇಲ್ಲ ಎಂದು ನಿವೇದಿತಾ ಕಣ್ಣೀರ ಕೋಡಿಯನ್ನೇ ಹರಿಸಿದ್ದಾರೆ. ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ ಅವರಿಗೆ ಶಾಲಿನಿ ಟೀಚರ್, ಕಾರ್ತಿಕ್ ಹಾಗೂ ಇತರರು ಸಮಾಧಾನ ಕೂಡ ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ನಿವೇದಿತಾ ಹಾಗೂ ದಿವಾಕರ್ ಮಧ್ಯೆ ಜಗಳದ ತಾಪ ಇನ್ನೂ ಕಡಿಮೆಯಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಸಿನಿಮಾದ ಈ ಸೂಪರ್ ಸ್ಟಾರ್ ಗೆ ಹುಡುಗಿ ಬೇಕಾಗಿದೆಯಂತೆ!