Publish Date: Sat, 09 Dec 2017 (16:56 IST)
Updated Date: Sat, 09 Dec 2017 (17:02 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬೆನ್ನು ನೋವಿನಿಂದ ನರಳುತ್ತಿದ್ದ ವೈಷ್ಣವಿ ನೋವು ಜಾಸ್ತಿಯಾಗಿ ನಡೆದಾಡಲು ಸಾಧ್ಯವಾಗದೆ ಅಳಲಾರಂಭಿಸಿದರು. ಮೊದಲಿನಿಂದಲೂ ಬೆನ್ನು ನೋವಿನಿಂದ ನರಳುತ್ತಿದ್ದ ವೈಷ್ಣವಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಮನೆಗೆ ಕಳುಹಿಸಿ ಎಂದು ಬಿಗ್ ಬಾಸ್ ನಲ್ಲಿ ಪರಿಪರಿಯಾಗಿ ಬೇಡಿಕೊಂಡರು.
ಇದಕ್ಕೆ ಅಕುಲ್ ರವರು’ ನಿನಗೆ ಈ ತರಹದ ತೊಂದರೆ ಇದ್ದ ಮೇಲೆ ಬಿಗ್ ಬಾಸ್ ನಿಯಮಗಳನ್ನು ತಿಳಿದಿದ್ದರು ಯಾಕೆ ಮನೆಯೊಳಗೆ ಬಂದೆ’ ಎಂದು ಪ್ರಶ್ನಿಸಿದರು. ನಂತರ ಬಿಗ್ ಬಾಸ್ ವೈಷ್ಣವಿಯವರ ಆರೋಗ್ಯದ ದೃಷ್ಟಿಯಿಂದ ತಮಗಿಚ್ಛೆ ಇದ್ದರೆ ಮನೆಯಿಂದ ಹೊರಹೋಗಲು ಹೇಳಿದರು. ಹಾಗಾಗಿ ವೈಷ್ಣವಿ ಮನೆಯಿಂದ ಹೊರಬಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ