Publish Date: Sat, 09 Dec 2017 (16:46 IST)
Updated Date: Sat, 09 Dec 2017 (16:52 IST)
ಮುಂಬೈ: ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಜಾಸ್ತಿ ಇರುವುದರಿಂದ, ಅವರನ್ನು ನೋಡಿದ ತಕ್ಷಣ ಎಲ್ಲೆಂದರಲ್ಲಿ ಬಂದು ಕಿರಿಕಿರಿ ಮಾಡುವುದು ಸಹಜ. ಇಲ್ಲೊಬ್ಬ ಅಭಿಮಾನಿ ಸಿನಿಮಾದಲ್ಲಿ ಕಿಸ್ ಕೊಡುವಂತೆ ತನಗೂ ಕಿಸ್ ನೀಡಬೇಕೆಂದು ದುಂಬಾಲು ಬಿದ್ದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಎದುರು ಬಂದ ಅಭಿಮಾನಿಯೊಬ್ಬ ಕನ್ನಡದ ’ರಣವಿಕ್ರಮ’ ದಲ್ಲಿ ನಟಿಸಿರುವ ನಟಿ ಅದಾ ಶರ್ಮಾ ಅವರ ಬಳಿ ಕಿಸ್ ಕೊಡುವಂತೆ ಹೇಳಿದ. ಇದರಿಂದ ಕೋಪಗೊಂಡ ನಟಿ ತಿರಸ್ಕರಿಸಿದಾಗ, ಆತ ಸಿನಿಮಾದಲ್ಲಿ ಹೀರೊಗೆ ಕೊಡ್ತಿರಾ ತನಗೆ ಯಾಕೆ ಕೊಡಲ್ಲ ಎಂದು ಕಿರಿಕಿರಿ ಮಾಡಿದ್ದಾನೆ.
ಆತನಿಗೆ ಬೇವರಿಳಿಸಿ ಅಲ್ಲಿಂದ ಹೊರಟ ನಟಿ, ನಂತರ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನುಭವವನ್ನು ಹಂಚ್ಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ