Publish Date: Sat, 02 Dec 2017 (20:10 IST)
Updated Date: Sat, 02 Dec 2017 (20:12 IST)
ಇಂದಿರಾ ಕ್ಯಾಂಟೀನ್ ಆಯ್ತು, ಅಪ್ಪಾಜಿ ಕ್ಯಾಂಟೀನ್ ಆಯ್ತು. ಇದೀಗ ನಟಿ ಮಾಜಿ ಸಂಸದೆ ರಮ್ಯ ಕ್ಯಾಂಟೀನ್ ಆರಂಭವಾಗಿದೆ.
ಮಾಜಿ ಸಂಸದೆ ರಮ್ಯಾ ಅಭಿಮಾನಿಯಾಗಿರುವ ರಘು ಎನ್ನುವವರು ರಮ್ಯಾ ಕ್ಯಾಂಟಿನ್ ಆರಂಭಕ್ಕೆ ಚಾಲನೆ ನೀಡಿದ್ದಾರೆ. ನಾಳೆಯಿಂದ ಅಶೋಕನಗರದಲ್ಲಿ ರಮ್ಯಾ ಕ್ಯಾಂಟೀನ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ರಮ್ಯಾ ಕ್ಯಾಂಟೀನ್‌ನಲ್ಲಿ 10 ರೂಪಾಯಿಗಳಿಗೆ ಊಟ ತಿಂಡಿ ದೊರೆಯಲಿದೆ ಎಂದು ರಮ್ಯಾ ಕ್ಯಾಂಟೀನ್ ಮಾಲೀಕರಾದ ರಘು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಮತ್ತು ರಮ್ಯ ಕ್ಯಾಂಟೀನ್ ಸ್ಪರ್ಧೆಯಲ್ಲಿ ಬಡವರ ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕೆಲವರು ಅಭಿಪ್ರಾಯಪಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.