Select Your Language

Notifications

webdunia
webdunia
webdunia
webdunia

ಪುರುಷರಿಗಿಂತ ಮಹಿಳೆಯ ಚುಂಬನವೇ ತುಂಬಾ ಸಿಹಿಯಂತೆ...!

ಪುರುಷರಿಗಿಂತ ಮಹಿಳೆಯ ಚುಂಬನವೇ ತುಂಬಾ ಸಿಹಿಯಂತೆ...!
ಬೆಂಗಳೂರು , ಬುಧವಾರ, 6 ಡಿಸೆಂಬರ್ 2017 (17:29 IST)
ಹೌದು...ಪುರುಷರಿಗಿಂತ ಮಹಿಳೆಯರು ತಮ್ಮ ಸಂಗಾತಿಯನ್ನು ದೀರ್ಘ ಸಮಯದವರೆಗೆ ಚುಂಬಿಸಲು ಇಷ್ಟಪಡುವುದರಿಂದ ಪುರುಷರ ಚುಂಬನವು ಸಪ್ಪೆಯಾಗಿರುತ್ತದೆ. ಹಾಗೂ ಅಲ್ಪ ಅವಧಿಯದಾಗಿರುತ್ತದೆ. ಆದರೆ ಮಹಿಳೆಯರು ಚಂಬನವನ್ನು ತಮ್ಮ ದಾಂಪತ್ಯದ ಸವಿ ಗುರುತಿಗಾಗಿ ದೀರ್ಘವಾಗಿಡಲು ಇಷ್ಟಪಡುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 
ಅಲ್ಲದೆ, ಚುಂಬನವು ಪುರುಷ ಹಾಗೂ ಮಹಿಳೆ ನಡುವಿನ ಎರಡು ಆತ್ಮಗಳ ಭೇಟಿಗಿಂತಲೂ ಎರಡು ಶಕ್ತಿಗಳ ಸಂಘರ್ಷವಂತೆ! ಪೆನ್ಸಿಲ್‌ವೇನಿಯಾದ ಅಲ್‌ಬ್ರೈಟ್ ಕಾಲೇಜಿನ ಸೈಕಾಲಜಿಸ್ಟ್ ಸುಸಾನ್ ಹೂಗಸ್ ಪ್ರಕಾರ, ಮಹಿಳೆಯರು ಚುಂಬನ ಸಂಬಂಧವನ್ನು ಗಟ್ಟಿಗೊಳಿಸಿ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಬಳಸುತ್ತಾರಂತೆ. ಆದರೆ ಪುರುಷರು ತಮ್ಮ ಸೆಕ್ಸ್ ನ್ನು ಕೊನೆಗೊಳಿಸಲು ಬಳಸುತ್ತಾರೆ. ಹೆಂಗಸರನ್ನು ಪ್ರಚೋದಿಸಲು ಚುಂಬನ ಸಹಕಾರಿ ಎಂಬುದು ಪುರುಷರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. 
 
ಹೂಗಸ್ ಹಾಗೂ ಆಕೆಯ ಸಹೋದ್ಯೋಗಿಗಳು ಈ ನಿಟ್ಟಿನಲ್ಲಿ ತನಿಖೆಯೊಂದನ್ನು ಕೈಗೊಂಡಿದ್ದು, 1000 ಮಹಿಳೆಯರು ಹಾಗೂ ಪುರುಷರನ್ನು ಚುಂಬನದ ಬಗೆಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ತನಿಖೆಯು ಸೆಕ್ಸ್, ಚುಂಬನದ ಆದ್ಯತೆಗಳು, ಇದರ ಬಗೆಗಿನ ಅಭಿಪ್ರಾಯಗಳು ಮೊದಲಾದವುಗಳನ್ನು ಒಳಗೊಂಡಿದೆ. ಪುರುಷರು ಹಾಗೂ ಮಹಿಳೆಯರು ಚುಂಬನವನ್ನು ತುಂಬಾ ಮುಖ್ಯವಾದ ಆಂತರಿಕ ಪ್ರಕ್ರಿಯೆ ಎಂದು ತಿಳಿದಿಕೊಂಡಿದ್ದು, ತಮ್ಮ ಹಾಗೂ ತಮ್ಮ ಸಂಗಾತಿಯ ಸಂಬಂಧದ ಭದ್ರತೆಗೆ ಚುಂಬನವು ಅಗತ್ಯವಾದುದೆಂದು ಎರಡು ವರ್ಗಗಳು ಒಪ್ಪಿಕೊಂಡಿದೆ. ಇದೊಂದು ಜೀವನದ ಸಣ್ಣ ಪವಾಡ ಎಂದು ಹೂಗಸ್ ಬಣ್ಣಿಸಿದ್ದಾರೆ.
 
ಚುಂಬನದಿಂದ ದಂಪತಿಗಳ ದಾಂಪತ್ಯದ ಮಧುರತೆಯನ್ನು ಅಳೆಯಬಹುದಾಗಿದೆ. ಹಾಗೂ ಚುಂಬಿಸುವಾಗ ಮುಖ್ಯವಾದ ಜೀವ ರಾಸಾಯನಿಕ ಅಂಶಗಳು ಪರಸ್ಪರ ವಿನಿಮಯಗೊಳ್ಳುತ್ತವೆ ಎಂಬುದು ಹೊಸ ಅಧ್ಯಯನ ತಿಳಿಸಿದೆ. ಮಹಿಳೆಯರು ಹಾಗೂ ಪುರುಷರು ದಾಂಪತ್ಯದ ವಿಷಯದಲ್ಲಿ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿಲ್ಲವೆಂದು ಅಧ್ಯಯನವು ತಿಳಿಸಿದೆ. 
 
ತಮ್ಮ ಹೆಂಡತಿಯರು ಕೆಟ್ಟ ಚುಂಬನವನ್ನು ನೀಡಿದರೂ ಸೆಕ್ಸ್ ವಿಷಯದಲ್ಲಿ ನಾವು ಅವರೊಂದಿಗೆ ಸಹಮತದಲ್ಲಿರುತ್ತೇವೆ ಎಂಬುದು ಹೆಚ್ಚಿನ ಪುರುಷರ ಹೇಳಿಕೆಯಾಗಿದೆ. ಆದರೂ ಚುಂಬನದ ವಿಷಯದಲ್ಲಿ ಮಹಿಳೆಯರೇ ಹೆಚ್ಚು ನಂಬಿಗಸ್ಥರಾಗಿದ್ದು, ತಮ್ಮ ಸಂಗಾತಿಯೊಂದಿಗೆ ಜೀವನ ಪೂರ್ತಿ ಬಾಳುವ ಇರಾದೆಯನ್ನು ಹೊಂದಿದ್ದಾರೆ. ಆದರೆ ಪುರುಷರು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಮಾತ್ರವೇ ಬಾಳುವ ಇಚ್ಛೆಯನ್ನು ಹೊಂದಿರುತ್ತಾರೆ ಎಂಬುದು ಹೂಗಸ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಹುಪಯೋಗಿ ಲಿಂಬೆ ಹಣ್ಣು: ಚರ್ಮದ ಕಾಂತಿಗೆ-ತೂಕ ನಿಯಂತ್ರಣ