Select Your Language

Notifications

webdunia
webdunia
webdunia
webdunia

ಸೆಕ್ಸ್ ನಂತರ ಪುರುಷರು ಏನು ಬಯಸುತ್ತಾರೆ ಗೊತ್ತಾ ? ಹಾಗಾದರೆ ಈ ಲೇಖನ ಓದಿ

ಸೆಕ್ಸ್ ನಂತರ ಪುರುಷರು ಏನು ಬಯಸುತ್ತಾರೆ ಗೊತ್ತಾ ? ಹಾಗಾದರೆ ಈ ಲೇಖನ ಓದಿ
ಬೆಂಗಳೂರು , ಭಾನುವಾರ, 3 ಡಿಸೆಂಬರ್ 2017 (19:22 IST)
ಹೆಂಗನಿಸ್ತು.. ನನಗಂತು ತುಂಬಾ ಮಜಾ ಬಂತು : ಈ ಮಾತು ಕೂಡ ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ನಿಮ್ಮ ಸಂಗಾತಿಯ ಶರೀರದಲ್ಲಿ ಹೊಸ ಸ್ಪೂರ್ತಿ ನೀಡುತ್ತದೆ. ಒಂದು ವೇಳೆ ನೀವು ಸಂಪುರ್ಣ ಸಂತುಷ್ಟರಾಗಿದ್ದರೆ , ಖಂಡಿತವಾಗಿಯು ನಿಮ್ಮ ಮುಖದಿಂದ ಈ ಮಾತು ಬರಲೇಬೇಕು.

ಸೆಕ್ಸ್ ನಂತರ ನಿಮ್ಮ ಸಂಗಾತಿಗೆ ಬಿಸಿಯಪ್ಪುಗೆ ಮಾಡಿ, ಕಿವಿಯಲ್ಲಿ ಈ ಮಾತು ಹೇಳಿದರು, ಆಗ ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೆ ಪ್ರೀತಿಸೋಕೆ ಶುರು ಮಾಡುತ್ತಾಳೆ. 
 
 ಮತ್ತೊಮ್ಮೆ ಈ ತರಹದ ಖುಷಿಯನ್ನು ಅನುಭವಿಸೋಣ : ಈ ವಾಕ್ಯ ಕೂಡ ನಿಮ್ಮ ಸಂಗಾತಿಯನ್ನು ಬಹಳಷ್ಟು ಖುಷಿಯನ್ನು ನೀಡುತ್ತದೆ. ಈ ಮಾತಿನಿಂದ ಸಂಭೋಗದ ನಂತರ ನೀವು ಖುಷಿಯಾಗಿದ್ದಿರಿ ಎಂದು ನಿಮ್ಮ ಸಂಗಾತಿಗೆ ಗೊತ್ತಾಗುತ್ತದೆ.
 
 ಈ ತರಹದ ಮಜಾ ಎಂದು ಸಿಕ್ಕಿರಲಿಲ್ಲ : ನಿಮ್ಮ ಪತಿ/ಪತ್ನಿಯ ಜೋತೆಗೆ ನಿವೇನು ಮೊದಲ ಸಲ ಸಂಭೋಗ ಮಾಡುತ್ತಿಲ್ಲ , ಆದರು ಪ್ರತಿಸಲ ಸಂಭೋಗ ಮಾಡಿದಾಗೆ ಈ ಮಾತನ್ನು ಹೇಳಿ. ನಿಮ್ಮ ಸಂಗಾತಿ ತುಂಬಾನೇ ಖುಷಿಯಾಗುತ್ತಾರೆ. 
 
ಪತಿ ಪತ್ನಿಯರ ನಡುವೆ , ಮೂಕನಾಗಿ ಸುಮ್ಮನೆ ಸೆಕ್ಸ್ ಮಾಡುವುದಷ್ಟೆ ಖುಷಿಯಲ್ಲ, ಸೆಕ್ಸ್ ಜೊತೆಗೆ ಈ ರೀತಿಯ ಮಧುರ ಮಧುರ ಮಾತುಗಳು ಆಡುತ್ತಿದ್ದರೆ, ನಿಮ್ಮ ಜೀವನ ಸುಂದವಾಗುತ್ತದೆ. ಸೆಕ್ಸ್ ಮಾಡಿ ಮಧುರವಾಗಿ ಮಾತನಾಡಿ, ಸದಾ ಖುಷಿಯಾಗಿರಿ. ಆಲ್ ದಿ ಬೆಸ್ಟ್
 
ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗಿ ಲೈಂಗಿಕ ಒತ್ತಡಗಳು ಉಂಟಾಗುತ್ತವೆ. ಯುವಕನಿಗೆ ಯುವತಿಯೊಬ್ಬಳನ್ನು ಕಂಡಾಗ ಲೈಂಗಿಕ ಭಾವನೆ ಉದ್ದೀಪಿಸಬಹುದು. ಯುವತಿಗೆ ಕೂಡ ಸುಂದರ ಯುವಕನೊಬ್ಬನನ್ನು ಕಂಡಾಗ ಲೈಂಗಿಕ ಅಪೇಕ್ಷೆ ಹುಟ್ಟಬಹುದು. ಆದರೆ ಆ ಭಾವನೆಗಳನ್ನು ಅದುಮಿಡಲು ಯುವಕರು,ಯುವತಿಯರು ಬಹಳ ಪ್ರಯತ್ನ ಮಾಡುತ್ತಾರೆ. ಆದರೆ ಅದುಮಿಟ್ಟರೂ, ಪ್ರವಾಹದಂತೆ ನುಗ್ಗುವ ಲೈಂಗಿಕ ಕಾಮನೆಗಳನ್ನು ನೀಗಿಸಿಕೊಳ್ಳಲು ಹದಿವಯಸ್ಸಿನಲ್ಲಿ ಅಡ್ಡದಾರಿ ಹಿಡಿಯುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಅನೇಕ ಯುವಕರು ಕೆಲವು ಚಟಗಳಿಗೆ ದಾಸರಾಗುವ ಸಂಭವವಿರುತ್ತದೆ.
 
ಇದರಿಂದಾಗಿ ಅವರಿಗೆ ತಾತ್ಕಾಲಿಕ ತೃಪ್ತಿ ಸಿಕ್ಕಿದರೂ, ಮುಂದೆ ಇದರಿಂದ ಮಾನಸಿಕ ದೌರ್ಬಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ದಾಂಪತ್ಯ ಜೀವನದಲ್ಲಿ ತೊಂದರೆಗೆ ಸಿಲುಕಬಹುದು. ಇವೆಲ್ಲವನ್ನೂ ಲೈಂಗಿಕ ಕಾಮನೆಗಳನ್ನು ನೀಗಿಸಿಕೊಳ್ಳುವ ಅಸಹಜ ಮಾರ್ಗ ಎನ್ನುವುದನ್ನು ನೀವು ತಿಳಿದಿರಬೇಕು. ಇನ್ನೂ ಕೆಲವು ಯುವಕರು ನೀಲಿ ಚಿತ್ರಗಳನ್ನು ವೀಕ್ಷಿಸುವ ಖಯಾಲಿ ಬೆಳೆಸಿಕೊಂಡರೆ ಅನೇಕ ಲೈಂಗಿಕ ಅಪರಾಧಗಳನ್ನು ಎಸಗಲು ದಾರಿ ಕಲ್ಪಿಸಬಹುದು. 
 
ಇಂದು ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಅವಶ್ಯಕವಾಗಿದೆಯೇ ಅಷ್ಟೇ ಅಪಾಯಕಾರಿ ಎನ್ನುವುದನ್ನು ಅರಿತಿರಬೇಕು. 
 
ಭಾರತ ಸಂಪ್ರದಾಯವಾದಿ ದೇಶ. ಇಲ್ಲಿನ ಕುಟುಂಬಗಳಲ್ಲಿ ಹಿರಿಯರು ಅನೇಕ ಕಟ್ಟುಪಾಡು ವಿಧಿಸಿರುತ್ತಾರೆ. ಅದರಲ್ಲಿ ವಿವಾಹಪೂರ್ವ ಲೈಂಗಿಕತೆ ಕುರಿತು ಕಟ್ಟುನಿಟ್ಟು ವಿಧಿಸಲಾಗಿರುತ್ತದೆ. ವಿವಾಹಪೂರ್ವ ಲೈಂಗಿಕ ಕ್ರಿಯೆಗೆ ನಮ್ಮ ಸಮಾಜದಲ್ಲಿ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ವಿದೇಶಗಳಲ್ಲಿ ಮುಕ್ತ ಲೈಂಗಿಕತೆಗೆ ಹೆಸರಾಗಿದ್ದು, ಅಲ್ಲಿ ವಿವಾಹಪೂರ್ವ ಲೈಂಗಿಕತೆಗೆ ನಿಷೇಧವಿಲ್ಲ. ಹೈಸ್ಕೂಲು ಬಾಲಕ, ಬಾಲಕಿಯರು ಕೂಡ ಪ್ರೌಢವಯಸ್ಕರಾಗುತ್ತಿದ್ದಂತೆ ಡೇಟಿಂಗ್ ಮುಂತಾದ ಕ್ರಿಯೆಗಳಲ್ಲಿ ತೊಡಗಿ ಮುಕ್ತ ಕಾಮಕೇಳಿಯಲ್ಲಿ ನಿರತರಾಗುವ ಉದಾಹರಣೆಗಳು ಕಂಡುಬಂದಿವೆ.
 
ಹೀಗಾಗಿ ವಿದೇಶಗಳಲ್ಲಿ ಯುವಕ, ಯುವತಿಯರಲ್ಲಿ ಲೈಂಗಿಕ ಒತ್ತಡ ಹೆಚ್ಚಾಗಿರದೇ ಅವರು ಲೈಂಗಿಕ ಆಸಕ್ತಿಯಿಂದ ದೂರವಾಗಿ ಇತರೆ ಕ್ರಿಯೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಲೈಂಗಿಕ ಅಪರಾಧ ಚಟುವಟಿಕೆಗಳು ಬಹುಮಟ್ಟಿಗೆ ಕಡಿಮೆಯಾಗಿರುತ್ತದೆ. 
 
ಅಂದ ಹಾಗೇ ಸಂಪ್ರದಾಯವಾದಿ ಸಮಾಜದ ಭಾರತೀಯ ಯುವಕರು, ಯುವತಿಯರು ತೀವ್ರ ಲೈಂಗಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಈ ಲೈಂಗಿಕ ಒತ್ತಡಗಳನ್ನು ನೀಗಿಸಿಕೊಳ್ಳಲು ವಿದ್ಯಾರ್ಥಿಗಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ, ಅನ್ಯ ಲಿಂಗೀಯರಲ್ಲಿ ಹೆಚ್ಚು ಆಸಕ್ತಿ ವಹಿಸದೇ ವಿದ್ಯಾರ್ಜನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಲೈಂಗಿಕತೆ ಕುರಿತು ಯೋಚಿಸುವುದರಲ್ಲಿ ತಪ್ಪಿಲ್ಲ ಎಂದು ತಿಳಿದಿರಲಿ. ಇದೊಂದು ಸಂಪೂರ್ಣ ಸಹಜ ಕ್ರಿಯೆ. ಕೆಲವು ಬಾರಿ ನಿಮಗೆ ಬೇಸರವಾದಾಗ ಯಾವುದಾದರೂ ಮನರಂಜನೆ ಬಯಸುತ್ತದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಸೆಕ್ಸ್ ಬಗ್ಗೆ ಯೋಚನೆ ಸುಳಿಯುತ್ತದೆ. ಲೈಂಗಿಕತೆ ಯೋಚನೆ ಸುಳಿಯಲು ಅನೇಕ ಒತ್ತಡಗಳು ಇರುತ್ತವೆ. ಅದರಲ್ಲಿ ಮಾನಸಿಕ ಒತ್ತಡ ಕೂಡ ಒಂದಾಗಿರುತ್ತದೆ.
 
ನಿಮ್ಮ ಮನಶ್ಶಕ್ತಿಯನ್ನು ಬೆಳೆಸಿಕೊಂಡರೆ ಅದನ್ನು ನೀಗಿಸಿಕೊಳ್ಳಬಹುದು. ನೀವು ನಿಜವಾಗಲೂ ಲೈಂಗಿಕತೆ ಕುರಿತು ಯೋಚನೆ ನಿಲ್ಲಿಸಬೇಕಾದರೆ ನಿಮಗೊಂದು ಬದ್ದತೆಯಿರಬೇಕು ಮತ್ತು ಅದಕ್ಕೆ ಅಂಟಿಕೊಂಡಿರಬೇಕು. ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನಿಮ್ಮ ಲೈಂಗಿಕ ಭಾವನೆಗಳನ್ನು ಹತ್ತಿಕ್ಕಬೇಕು.ನಿಮ್ಮ ಸೆಕ್ಸ್ ಡ್ರೈವ್‌ಯನ್ನು ಸೃಜನಾತ್ಮಕ ಚಟುವಟಿಕೆಗಳಿಗೆ ವಿನಿಯೋಗಿಸಿಕೊಂಡು, ಉದಾ, ಬರವಣಿಗೆ, ಓದುವುದು, ಪೇಂಟಿಂಗ್, ಸಂಗೀತ ನುಡಿಸುವ ಮೂಲಕ ತೃಪ್ತಿ ಹೊಂದಬಹುದು. ನೀವು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಲೈಂಗಿಕ ಭಾವನೆಗಳನ್ನು ನೀಗಿಕೊಳ್ಳಬಹುದು. ಕ್ಷಣಿಕ ಸುಖಕ್ಕೆ ಬಲಿಬಿದ್ದು ಇಂದಿನ ಜೀವನ ಹಾಳುಮಾಡಿಕೊಳ್ಳದೇ, ಮುಂದಿನ ಭವ್ಯ ಭವಿಷ್ಯದ ಕನಸು ಕಾಣುತ್ತಾ ಹದಿವಯಸ್ಕರು ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಮ ಎಂದರೆ ಕೆಟ್ಟದ್ದಾ? ಜನ ಯಾಕಿಂಗಾಡತಾರೆ.....