Publish Date: Fri, 01 Dec 2017 (10:29 IST)
Updated Date: Fri, 01 Dec 2017 (10:30 IST)
ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಅಥವಾ ಕಾಸ್ಟಿಂಗ್ ಕೌಚ್ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿದೆ. ಇದರ ಬಗ್ಗೆ ನಟಿಯರು ಮನಬಿಚ್ಚಿ ಮಾತನಾಡಲು ತೊಡಗಿದ್ದಾರೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ಕೂಡಾ ಮಾತನಾಡಿದ್ದಾರೆ.
ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಮಂಚಕ್ಕೆ ಕರೆಯುವ ಹೀನ ಕೃತ್ಯ ನಡೆಯುತ್ತಿದೆಯೇ ಎಂದು ಕೇಳಿದಾಗ ನಟ ಸಲ್ಮಾನ್ ಖಾನ್ ನನ್ನ ಗಮನಕ್ಕೆ ಇದುವರೆಗೆ ಇಂತಹ ಘಟನೆ ಬಂದಿಲ್ಲ. ನಾನು ತುಂಬಾ ಸಮಯದಿಂದ ಇಲ್ಲಿದ್ದೇನೆ. ಆದರೆ ಯಾರೂ ನನ್ನ ಬಳಿ ಬಂದು ಹೀಗೆ ಆಗಿದೆ ಎಂದು ಹೇಳಿಲ್ಲ.
ಆದರೆ ಒಂದು ವೇಳೆ ಅವಕಾಶಕ್ಕಾಗಿ ಯಾರದೋ ಜತೆ ಹಾಸಿಗೆ ಹಂಚಬೇಕೆಂದರೆ ಅದಕ್ಕಿಂತ ಹೀನ ಕೃತ್ಯ ಇನ್ನೊಂದಿಲ್ಲ. ನನ್ನ ಬಳಿಗೆ ಯಾರಾದರೂ ಹಾಗೆ ಹೇಳಿಕೊಂಡು ಬಂದರೆ ಅವರ ಜನ್ಮ ಜಾಲಾಡದೇ ಬಿಡುವುದಿಲ್ಲ ಎಂದು ಸಲ್ಲುಮಿಯಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ