Select Your Language

Notifications

webdunia
webdunia
webdunia
webdunia

ಕಾಮ ಎಂದರೆ ಕೆಟ್ಟದ್ದಾ? ಜನ ಯಾಕಿಂಗಾಡತಾರೆ.....

ಕಾಮ ಎಂದರೆ ಕೆಟ್ಟದ್ದಾ? ಜನ ಯಾಕಿಂಗಾಡತಾರೆ.....
ಬೆಂಗಳೂರು , ಭಾನುವಾರ, 3 ಡಿಸೆಂಬರ್ 2017 (19:10 IST)
ಮನುಷ್ಯ ಮತ್ತಿತರ ಜೀವಿಗಳು ಹುಟ್ಟೋದು ಕಾಮದ ಮೂಲಕವೆ, ಮನುಷ್ಯ ಅಷ್ಟೇ ಅಲ್ಲ, ಸಸ್ಯಗಳು ಕೂಡ ಕಾಮದಿಂದ ಸಂತಾನೋತ್ಪತ್ತಿ ಮಾಡುತ್ತವೆ. ಮನುಷ್ಯ ಹುಟ್ಟಿದಾಗಿನಿಂದ ಈ ಕಾಮ ಜಾರಿಯಲ್ಲಿದೆ. ಎಲ್ಲರು ಇದನ್ನು ಅನುಭವಿಸುತ್ತಾರೆ. ಆದರೆ ಇದರ ಬಗ್ಗೆ ಮಾತನಾಡಿದಾಗ ಮಾತ್ರ ಮುಖ ಸಿಂಪಡಿಸಿಕೊಳ್ಳುತ್ತಾರೆ. 
ಆದರೆ ಈ ಕಾಮದ ಬಗ್ಗೆ ತಲೆ ಕೆಡಿಸಿಕೊಳ್ಳುವರು ಕೂಡ ಹೆಚ್ಚು ಜನರಿದ್ದಾರೆ ಎಂದು ಮರೆಯಬೇಡಿ. 
 
ಕೇವಲ ಎರಡು ದೇಹಗಳ ಮಿಲನ ಮಹೋತ್ಸವ ಮಾತ್ರ ಕಾಮನಾ ? ಪ್ರೀತಿಯಲ್ಲಿ ಕಾಮ ಇರೋದಿಲ್ಲವಾ ? ಹಂಗಾದರೆ ಪ್ರೀತಿಸಿದವರು ಮದುವೆ ಯಾಕಾಗ್ಬೇಕು ? ಈ ಕಾಮದ ತುಡಿತಕೊಸ್ಕರ, ಅನುಭವಿಸುವುದಕ್ಕೋಸ್ಕರ ಮದುವೆ ಆಗುತ್ತಾರೆ. ಇದು ಸತ್ಯ. ಆದರೆ ಜನ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳೋದಿಲ್ಲ . ಅಂತರಿಕವಾಗಿ ಈ ಕಾಮದ ರೂಪದಲ್ಲಿ ಆಕರ್ಷಣೆ ಆಗುತ್ತಾರೆ. 
 
ಮದುವೆ ಮತ್ತು ಕಾಮ : 
 
ಮದುವೆಯಾಗುವ ಸಂಧರ್ಭದಲ್ಲಿ ಹುಡುಗ ದಷ್ಟಪುಷ್ಟವಾಗಿದ್ದಾನೆ, ಹುಡುಗಿ ಸುಂದರವಾಗಿದ್ದಾಳೆ, ಸಣ್ಣವಾಗಿದ್ದಾಳೆ, ತುಂಬಿದ ಮೈಯವಳಾಗಿದ್ದಾಳೆ, ದಪ್ಪ ಇದ್ದಾಳೆ ಇದೆಲ್ಲ ನೋಡೋದು ಯಾಕೆ ? 
 
ಹುಡುಗ ಹುಡುಗಿ ಇಬ್ಬರು ಒಂದೆ ಸೈಜಿನವರಾಗಿದ್ದಾರೆ. ಹಿಂಗೆ ಸಾಕಷ್ಟು ತರಹದಲ್ಲಿ ತಾಳೆ ಹಾಕಿ ಹುಡುಗ ಹುಡುಗಿಗೆ ಮದುವೆ ಮಾಡುತ್ತಾರೆ. ಇಲ್ಲಿ ಇಬ್ಬರ ಮಿಲನ ಮಹೊತ್ಸವದಲ್ಲಿ ಹೊಂದಾಣಿಕೆಯಾಗುವ ಹಾಗೆ ದಪ್ಪ , ಸಣ್ಣ ಅಂತ ಯೋಚಿಸಿ ಮದುವೆ ಮಾಡುತ್ತಾರೆ. ಆದರು ಬಹಿರಂಗವಾಗಿ ಕಾಮದ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಾರೆ. 
 
ಮೊದಲ ರಾತ್ರಿ :
 
ಮದುವೆಯಾದ ನಂತರ ಮೊದಲ ರಾತ್ರಿ ಕೂಡ ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಮೊದಲ ರಾತ್ರಿಯ ದಿನ ಮತ್ತು ಸಮಯ ನಿಗದಿಪಡಿಸಲಾಗುತ್ತದೆ. ಇದೆಲ್ಲ ಶಾಸ್ತ್ರೋಕ್ತವಾಗಿ ನಡೆಸಬೇಕಾದರೆ, ಕಾಮದ ಬಗ್ಗೆ ಬಹಿರಂಗವಾಗಿ ಮಾತನಾಡಿದಾಗ, ಲೇಖನ ಬರೆದಾಗ ಕೆಲವರು ಕೋಪ ಮಾಡಿಕೊಳ್ಳುತ್ತಾರೆ. ಆದರೆ ಲೈಂಗಿಕ ಮಾಹಿತಿ ಮನುಷ್ಯನಿಗೆ ಇರಲೇ ಬೇಕು. 
 
ಡೈವೋರ್ಸ್ ಮತ್ತು ಕಾಮ : 
 
ನಿಮಗೆ ಗೊತ್ತಾ ? ಸಾಮನ್ಯವಾಗಿ ಪತಿ ಪತ್ನಿಯರ ನಡುವೆ ಹೆಚ್ಚಿನ ಜಗಳ ಈ ಕಾಮಕೋಸ್ಕರ ಆಗುತ್ತದೆ. ರಾತ್ರಿ ಪತಿ ಪತ್ನಿಯರ ನಡುವೆ ಮಿಲನ ಮಹೋತ್ಸವ ಸರಿಯಾಗಿ ನಡೆಯದಿದ್ದರೆ ದಾಂಪತ್ಯದಲ್ಲಿ ಬಿರುಗಾಳಿ ಏಳುವುದುಂಟು. ಇಂಥ ಉದಾಹರಣೆಗಳು ನಾವು ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಲೈಂಗಿಕವಾಗಿ ನನ್ನ ಪತಿ/ಪತ್ನಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಡೈವೋರ್ಸ್ ಕೊಟ್ಟ ಉದಾಹರಣೆಗಳು ಇವೆ.
 
ಇದಕ್ಕೆಲ್ಲ ಕಾರಣ ಏನು ?
 
ಈ ಡೈವೋರ್ಸ್ ಗಳಿಗೆ ಕಾರಣ ಇಷ್ಟೆ. ನಮ್ಮ ದೇಶದಲ್ಲಿ ಮುಕ್ತವಾಗಿ ಕಾಮದ ಬಗ್ಗೆ ಮಾತನಾಡುವುದಿಲ್ಲ. ಈ ವಿಷಯದ ಬಗ್ಗೆ ಮಾತನಾಡಲು ಅಸಹ್ಯಪಟ್ಟಿಕೊಳ್ಳುತ್ತೇವೆ. ಸರಿಯಾದ ಲೈಂಗಿಕ ಮಾಹಿತಿ ಇರದ ಕಾರಣ ನಮ್ಮ ದೇಶದಲ್ಲಿ ಪತಿ ಪತ್ನಿಯರ ಮದ್ಯೆ ಜಗಳ ಆಗುವುದು ಸಹಜ. 
 
ಪರಿಹಾರ ಏನು ?
 
ನಮ್ಮ ಜನರಿಗೆ ಸರಿಯಾದ ಲೈಂಗಿಕ ಜ್ಞಾನ ಇಲ್ಲದ ಕಾರಣ ನಮ್ಮ ಜನರು ಕಾಮದ ಬಗ್ಗೆ ತಪ್ಪು ಅಭಿಪ್ರಾಯ ತಿಳಿದುಕೊಂಡು ವಿವಿಧ ರೀತಿಯ ಅನಾಹುತಗಳು ಮಾಡಿಕೊಳ್ಳುತ್ತಾರೆ. ವಿಧ್ಯಾರ್ಥಿ ಮಟ್ಟದಿಂದಲೇ ಲೈಂಗಿಕ ಜ್ಞಾನ ನೀಡುವುದು ಅವಶ್ಯಕ ಎನ್ನುವ ವಾದ ಕೇಳಿ ಬರುತ್ತಿದ್ದರು, ಇದು ಅನುಷ್ಟಾನಕ್ಕೆ ಬರುತ್ತಿಲ್ಲ. ಸರಿಯಾದ ಲೈಂಗಿಕ ಜ್ಞಾನ ಇರದ ಕಾರಣ ರೆಪ್ ಮತ್ತಿತರ ಅಫರಾಧ ಚಟುವಟಿಕೆಗಳು ನಡೆಯುತ್ತಿವೆ. 
 
ಕೊನೆಯ ಮಾತು : 
 
ಮನುಷ್ಯನಿಗೆ ಊಟ ನೀರು ಎಷ್ಟು ಮುಖ್ಯವೋ ಅಷ್ಟೆ ಕಾಮ ಕೂಡ ಮುಖ್ಯ. ಅಂತರಿಕವಾಗಿ ಎಲ್ಲರು ಈ ಮಾತನ್ನು ಒಪ್ಪಿಕೊಂಡರು ಕೂಡ ಬಾಹ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ನೈತಿಕ ಕಾಮ ಅನುಭವಿಸುವುದು ಒಳ್ಳೆಯದು. ಹೊರಗಿನ ಊಟ ಆರೋಗ್ಯಕ್ಕೆ ಹಾನಿಕಾರಕ, ಹಾಗೆ ಅನೈತಿಕ ಕಾಮ ಕೂಡ ಕೆಟ್ಟದ್ದು. 
 
ನಮ್ಮ ಜನರಿಗೆ ಸರಿಯಾದ ಲೈಂಗಿಕ ಜ್ಞಾನ ನೀಡಬೇಕಾದುದ್ದು ಅವಶ್ಯಕ, ನಿವೇನಂತಿರಾ... ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳುಳ್ಳಿಯ ಮಹತ್ವ ಗೊತ್ತಾ? ಉಪಯೋಗಿಸಿ ನೋಡಿ ಆಚ್ಚರಿ ಪಡುವಿರಿ