Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!

ಬಿಗ್ ಬಾಸ್ ಸಂಜನಾಗೆ ಮದ್ವೆಯಂತೆ! ಆದ್ರೆ ವರ ಮಾತ್ರ ಭುವನ್ ಅಲ್ಲ!
ಬೆಂಗಳೂರು , ಗುರುವಾರ, 7 ಡಿಸೆಂಬರ್ 2017 (10:50 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 4 ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಂಜನಾ ಆಡಿದ್ದಕ್ಕಿಂತ ಭುವನ್ ಜತೆಗೆ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆ ನಟಿ ಇದೀಗ ವಿವಾಹವಾಗಲಿದ್ದಾರೆ. ಆದರೆ ವರ ಭುವನ್ ಅಲ್ಲ.
 

ಬಿಗ್ ಬಾಸ್ ಮನೆಯೊಳಗೆ ಜತೆ ಜತೆಯಾಗಿರುತ್ತಿದ್ದ ಇವರು ಲವ್ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಬಿಗ್ ಬಾಸ್ ಇವರಿಬ್ಬರೂ ನಾನು ಮತ್ತು ಸಂಜು ಎಂಬ ಧಾರವಾಹಿಯನ್ನೂ ಮಾಡಿದ್ದರು. ಈ ನಡುವೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಸುದ್ದಿ ಜೋರಾಗಿತ್ತು, ಕೊನೆಗೆ ಸಂಜನಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಬೇಕಾಯ್ತು.

ಇದೀಗ ಸಂಜನಾ ನಿಜವಾಗಿಯೂ ಮದುವೆಯಾಗುತ್ತಿರುವ ಸುದ್ದಿ ಬಂದಿದೆ. ಸಂಜನಾ ಮದುವೆಯಾಗುತ್ತಿರುವುದು ಅವರ ಸ್ನೇಹಿತ ಗೌರವ್ ಜತೆ. ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದರಂತೆ. ಇದೀಗ ಸಪ್ತಪದಿ ತುಳಿಯುವುದಕ್ಕೆ ರೆಡಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಮತ್ತೆ ರಿಯಾಜ್ ಮೇಲೆ ಜಗನ್ ಆವಾಜ್!