Publish Date: Thu, 07 Dec 2017 (10:28 IST)
Updated Date: Thu, 07 Dec 2017 (10:36 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ಆವೃತ್ತಿಯಲ್ಲಿ ನೀಡಿದ್ದ ಗಂಧದ ಗುಡಿ ಟಾಸ್ಕ್ ನೀಡಿದ್ದು ಸ್ಪರ್ಧಿಗಳೆಲ್ಲಾ ಕಾಡು ಪ್ರಾಣಿಗಳಾಗಿದ್ದಾರೆ. ಹುಲಿ ವೇಷ ತೊಟ್ಟಿರುವ ಜಗನ್ ಮತ್ತೆ ಆಂಗ್ರಿ ಯಂಗ್ ಮ್ಯಾನ್ ಆಗಿದ್ದಾರೆ.
ಜಗನ್ ಮುಂಗೋಪದಿಂದಾಗಿ ಪ್ರತೀ ಬಾರಿ ಟಾಸ್ಕ್ ನಡೆಯುವಾಗಲೂ ಜಗಳ ಸಾಮಾನ್ಯ. ಈ ಟಾಸ್ಕ್ ನಲ್ಲೂ ರಿಯಾಜ್ ವಿರುದ್ಧ ತಿರುಗಿಬೀಳುವ ಜಗನ್ ಕೈ ಎತ್ತಿ, ಕಣ್ಣು ದೊಡ್ಡದು ಮಾಡಿ ಸವಾಲು ಹಾಕುತ್ತಾರೆ.
ನಿಜಕ್ಕೂ ಜಗನ್ ರಿಯಾಜ್ ಮೇಲೆ ಇಷ್ಟೊಂದು ಸಿಟ್ಟಿಗೇಳುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಜಗನ್-ರಿಯಾಜ್ ಕಿತ್ತಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಸಮಾಧಾನದಿಂದಿದ್ದರು. ಕಳೆದ ವಾರ ಕಿಚ್ಚ ಸುದೀಪ್ ಜಗನ್ ವರ್ತನೆ ಬಗ್ಗೆ ಬುದ್ಧಿ ಮಾತು ಹೇಳಿದ್ದರು. ಹಿಂದೊಮ್ಮೆ ಕಾಲರ್ ಆಫ್ ದಿ ವೀಕ್ ಮಾಡಿದವರೂ ಜಗನ್ ವರ್ತನೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಜಗನ್ ಮಾತ್ರ ಅದನ್ನೇ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ