Daily Horoscope

Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸರ್ಪ್ರೈಸ್ ಅತಿಥಿ!

ಬಿಗ್ ಬಾಸ್ ಕನ್ನಡ
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ತಾನೇ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆದ ಶಾಕ್ ನಿಂದ ಸ್ಪರ್ದಿಗಳು ಹೊರಬರುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೊಸ ಅತಿಥಿ ಕಾಲಿಡುತ್ತಿದ್ದಾರೆ.
 

ಸಪ್ಪೆಯಾಗಿರುವ ಸ್ಪರ್ಧಿಗಳಿಗೆ ಚುರುಕು ಮುಟ್ಟಿಸಲು ಬಿಗ್ ಬಾಸ್ 2 ವಿನ್ನರ್ ಅಕುಲ್ ಬಾಲಾಜಿ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ತಾವೇ ಟಾಸ್ಕ್ ಕೊಡಲಿದ್ದಾರೆ.

ಸ್ಪರ್ಧಿಗಳನ್ನು ಹಾಡಿಸಿ, ಕುಣಿಸಿ ಪ್ರೇಕ್ಷಕರಿಗೂ ಮಜಾ ಕೊಡಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಅಕುಲ್ ಮನೆಯೊಳಗೆ ಮಾಡುವ ತುಂಟಾಟಗಳನ್ನು ನೋಡಲು ಇಂದಿನ ಸಂಚಿಕೆಯನ್ನು ತಪ್ಪದೇ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

79 ವಯಸ್ಸಿನ ಖ್ಯಾತ ಬಾಲಿವುಡ್ ನಟ ಶಶಿಕಪೂರ್ ನಿಧನ