Select Your Language

Notifications

webdunia
webdunia
webdunia
webdunia

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?
ಬೆಂಗಳೂರು , ಶನಿವಾರ, 21 ಅಕ್ಟೋಬರ್ 2017 (21:36 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಸುಮಾ ಹೊರಬಂದಿದ್ದಾರೆ.

ಈ ವಾರ 7 ಮಂದಿ ನಾಮಿನೇಟ್ ಆಗಿದ್ದರು. ಬಾರ್ಬಿ ಡಾಲ್ ನಿವೇದಿತಾ ಗೌಡ ಕ್ಯಾಪ್ಟನ್ ನಿಂದ ಡೈರೆಕ್ಟ್ ನಾಮಿನೇಟ್ ಆಗಿದ್ದರು. ಈ ಪೈಕಿ ಜಯಶ್ರೀನಿವಾಸನ್, ಜೆಕೆ, ನಿವೇದಿತಾ, ದಿವಾಕರ್, ಜಗನ್, ಮೇಘ ಸೇಫ್ ಆಗಿದ್ದು, ಸುಮಾ ಎಲಿಮಿನೇಟ್ ಆಗಿದ್ದಾರೆ.
webdunia

ಬಿಗ್ ಬಾಸ್ `ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಮಾತನಾಡುವಾಗ ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಯೇ ಬೇರೆ. ನಿವೇದಿತಾ ಗೌಡ ಉತ್ತರ ನೀಡಿದ್ದೇ ಬೇರೆ. ಬರೀ ಜರ್ನಿ ಮಾಡಿ ಸುಸ್ತಾಗಿದ್ದು, ಮನೆಯಲ್ಲಿ ಬಾರ್ಬಿ ಡಾಲ್ ಗೆ ಡಾನ್ಸ್ ಮಾಡುವ ಅವಕಾಶವೇ ಸಿಕ್ಕಿಲ್ಲವಂತೆ. ಅಲ್ಲದೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಮನೆಯ ನೆನಪು, ಮೊಬೈಲ್ ಅನ್ನಿಸಿಲ್ಲವಂತೆ. ಹೀಗಾಗಿ ಪ್ಲೀಸ್ ನನ್ನನ್ನು ಮನೆಯಿಂದ ಹೊರಗೆ ಕಳಿಸಬೇಡಿ ಎಂದು ಕಿಚ್ಚನ ಬಳಿ ರಿಕ್ಷೆಸ್ಟ್ ಮಾಡಿದ್ರು.

ಸುಮಾ ಅವರು ಮನೆಯಿಂದ ತೆರಳುವಾಗ ಬಿಗ್ ಬಾಸ್ ಸೂಪರ್ ಅಧಿಕಾರ ನೀಡಿದ್ದರು. ಈ ಸೂಪರ್ ಅಧಿಕಾರವನ್ನ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಳಸುವಂತೆ ಆದೇಶ ನೀಡಿದ್ರು. ಅಂತೆಯೇ ಸುಮಾ ಈ ಸೂಪರ್ ಅಧಿಕಾರವನ್ನು ಸಿಹಿಕಹಿ ಚಂದ್ರು ಅವರಿಗೆ ಈ ಅಧಿಕಾರವನ್ನ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…