ವರದಕ್ಷಿಣೆಗಾಗಿ ಮಹಿಳೆಯ ಮೇಲೆ ದೌರ್ಜನ್ಯ

ಬುಧವಾರ, 13 ಡಿಸೆಂಬರ್ 2017 (14:41 IST)
ವಿಜಯಪುರ: ಜನರು ಜೀವಕ್ಕಿಂತ  ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವುದಕ್ಕೆ ವರದಕ್ಷಿಣೆ ಕಿರುಕುಳಗಳ ಪ್ರಕರಣಗಳೆ ಒಂದು ಸಾಕ್ಷಿ. ಈ ವರದಕ್ಷಿಣೆ ಕಿರುಕುಳಗಳನ್ನು ನಿರ್ಮೂಲನೆ ಮಾಡಲು ಸರ್ಕಾರ  ಅನೇಕ ಕಾನೂನುಗಳನ್ನು ಜಾರಿಗೊಳಿಸಿದರು ಇತ್ತೀಚಿನ ದಿನಗಳಲ್ಲಿ ಈ ಘಟನೆಗಳು ನಡೆಯುತ್ತಲೆ ಇರುತ್ತದೆ.

ಇದಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಯಲ್ಲಮ್ಮನ ಬೂದಿಹಾಳ ಗ್ರಾಮದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.


ಸುವರ್ಣ ರಾಮಣ್ಣ ಅಮಾತಿಗೌಡರ್ (27) ಬದುಕುಳಿದ ಮಹಿಳೆ. ಗಂಡ, ಮೈದುನ ಹಾಗೂ ಅತ್ತೆ-ಮಾವ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ಇದೆ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂಬ ತವರು ಮನೆಯವರ ಆರೋಪದ ಮೇಲೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. ಗಾಯಗೊಂಡ ಮಹಿಳೆಯನ್ನು ಬಾಗಲುಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿದ್ದರಾಮಯ್ಯಗೆ ಹಿಂದೂ ಸಂಘಟನೆ ಎಂದರೆ ಅಲರ್ಜಿ- ಸಿ.ಟಿ.ರವಿ