Publish Date: Wed, 13 Dec 2017 (08:59 IST)
Updated Date: Wed, 13 Dec 2017 (09:01 IST)
ನವದೆಹಲಿ: ಪ್ರಧಾನಿ ಮೋದಿ ಬೆಳ್ಳಗೆ, ಎತ್ತರದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಪ್ರಧಾನಿ ಮೋದಿ ಈ ರೀತಿ ಬೆಳ್ಳಗಾಗಿದ್ದು ಹೇಗೆ? ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ರಹಸ್ಯ ಬಹಿರಂಗಪಡಿಸಿದ್ದಾರೆ.
ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕ ಅಲ್ಪೇಶ್ ವಿಚಿತ್ರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ 80 ರೂ. ಬೆಲೆಯ ಅಣಬೆ ತಿಂದೇ ಇಷ್ಟು ಬೆಳ್ಳಗಾಗಿದ್ದಾರೆ ಎಂದಿದ್ದಾರೆ!
‘ಪ್ರಧಾನಿ ಮೋದಿ ಮೊದಲು ನನ್ನಂತೆ ಕಪ್ಪಗಿದ್ದರು. ಆದರೆ ಈಗ ಬೆಳ್ಳಗಾಗಿದ್ದಾರೆ. ಅದಕ್ಕೆ ಕಾರಣ ತೈವಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ದುಬಾರಿ ಅಣಬೆ. ಅಲ್ಲಿ ಈ ಅಣಬೆಗೆ ಒಂದಕ್ಕೆ 80 ಸಾವಿರ ರೂ. ಇದೆ. ಮೋದಿ ಜಿ ದಿನಕ್ಕೆ 5 ಅಣಬೆ ಸೇವಿಸುತ್ತಾರೆ. ಅಂದರೆ ಅದಕ್ಕೆ 4 ಲಕ್ಷ ರೂ. ಖರ್ಚು ಮಾಡುತ್ತಾರೆ. ಅದಾದ ಬಳಿಕ ಅವರು ಬಿಳಿ ಬಣ್ಣಕ್ಕೆ ತಿರುಗಿದ್ದಾರೆ. ಅವರಿಗೆ ನಾವು ತಿನ್ನುವ ಸಾಮಾನ್ಯ ದಾಲ್-ಚಾವಲ್ ಇಷ್ಟವಾಗಲ್ಲ’ ಎಂದು ಅಲ್ಪೇಶ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ