Daily Horoscope

Select Your Language

Notifications

webdunia
webdunia
webdunia
webdunia

ಮೋದಿಜೀ, ನೀವ್ಯಾಕೆ ನನ್ನ ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲ? ರಾಹುಲ್ ಪ್ರಶ್ನೆ

ರಾಹುಲ್ ಗಾಂಧಿ
ನವದೆಹಲಿ: ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ದಿನಕ್ಕೊಂದು ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಲು ಹೊರಟಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮೋದಿ ಮೌನ ಇರಿಸು ಮುರಿಸು ತಂದಿದೆ.
 

ಇದುವರೆಗೆ ದಿನಕ್ಕೊಂದು ಪ್ರಶ್ನೆಯಂತೆ ಪ್ರಧಾನಿ ಮೋದಿ ನೀಡಿದ್ದ ವಿವಿಧ ಆಶ್ವಾಸನೆಗಳ ಬಗ್ಗೆ ಹಾಗೂ ಸರ್ಕಾರದ ವೈಫಲ್ಯದ ಬಗ್ಗೆ 10 ಪ್ರಶ್ನೆ ಕೇಳಿದ್ದ ರಾಹುಲ್ ಗಾಂಧಿ, 11 ನೇ ಪ್ರಶ್ನೆಯಾಗಿ ನೀವ್ಯಾಕೆ ನನ್ನ ಯಾವ ಪ್ರಶ್ನೆಗೂ ಉತ್ತರಿಸದೇ ಮೌನವಾಗಿದ್ದೀರಿ ಎಂದು ಸವಾಲು ಹಾಕಿದ್ದಾರೆ.

ಟ್ವಿಟರ್ ನಲ್ಲಿ ಪ್ರಧಾನಿ ಮೋದಿಗೆ ಕುಟುಕಿರುವ ರಾಹುಲ್ ಗಾಂಧಿ ‘ಇದುವರೆಗೆ ನಿಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ವಿಕಾಸದ ಮಾತು ಕೇಳಿಬಂದಿಲ್ಲ. ಯಾವುದೇ ಘೋಷಣೆ ಪತ್ರವನ್ನೂ ಹೊರ ತಂದಿಲ್ಲ. ನನ್ನ 10 ಪ್ರಶ್ನೆಗಳಿಗೂ ಉತ್ತರ ಹೇಳಿಲ್ಲ. ಅಂದರೆ ವಿಕಾಸ ಭಾಷಣದಲ್ಲಿ ಮಾತ್ರವಾ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯಪುರದಲ್ಲಿ ಡಬ್ಬಲ್ ಮರ್ಡರ್