Select Your Language

Notifications

webdunia
webdunia
webdunia
webdunia

3 ವರ್ಷಗಳಲ್ಲಿ ಪ್ರಚಾರಕ್ಕಾಗಿ 3754 ಕೋಟಿ ರೂ. ವೆಚ್ಚ ಮಾಡಿದ ಮೋದಿ ಸರಕಾರ

3 ವರ್ಷಗಳಲ್ಲಿ ಪ್ರಚಾರಕ್ಕಾಗಿ 3754 ಕೋಟಿ ರೂ. ವೆಚ್ಚ ಮಾಡಿದ ಮೋದಿ ಸರಕಾರ
ನವದೆಹಲಿ , ಶನಿವಾರ, 9 ಡಿಸೆಂಬರ್ 2017 (13:31 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ ಮೂರುವರೆ ವರ್ಷಗಳಲ್ಲಿ 3754 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಇತಿಹಾಸವನ್ನೇ ಸೃಷ್ಟಿಸಿದೆ. 
ಆರ್‌ಟಿಐಯಿಂದ ಮಾಹಿತಿ ಬಹಿರಂಗವಾಗಿದ್ದು, ಏಪ್ರಿಲ್ 2014 ರಿಂದ ಅಕ್ಟೋಬರ್ 2017 ರವರೆಗೆ ಎಲೆಕ್ಟ್ರಾನಿಕ್, ಮುದ್ರಣ ಮಾಧ್ಯಮ ಮತ್ತು ಇತರ ಪ್ರಚಾರ ಮೂಲಗಳಿಗಾಗಿ ಸರಕಾರ 37,54,06,23,616 ಕೋಟಿ ರೂಪಾಯಿ ವೆಚ್ಚ ಮಾಡಿದೆ.  
 
ಗ್ರೆಟರ್‌ ನೊಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್‌ವೀರ್ ತನ್ವರ್ ವಾರ್ತಾ ಮತ್ತು ಪ್ರಚಾರ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸಿ ಆರ್‌ಐಟಿ ಅನ್ವಯ ಮಾಹಿತಿ ನೀಡುವಂತೆ ಕೋರಿದ್ದರು. 
 
ಮಾಹಿತಿ ಪ್ರಕಾರ, ಮೋದಿ ಸರಕಾರ 1656 ಕೋಟಿ ರೂಪಾಯಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ( ರೇಡಿಯೋ, ಡಿಜಿಟಲ್ ಸಿನೆಮಾ, ದೂರದರ್ಶನ್, ಇಂಟರ್‌ನೆಟ್, ಎಸ್‌ಎಂಎಸ್ ಮತ್ತು ಟಿವಿ ಚಾನಲ್‌ಗಳ) ವೆಚ್ಚ ಮಾಡಿದೆ. ಮುದ್ರಣ ಮಾಧ್ಯಮಕ್ಕೆ 1698 ಕೋಟಿ ರೂಪಾಯಿ ವೆಚ್ಚ ಮಾಡಿರುವುದು ಬಹಿರಂಗವಾಗಿದೆ.
 
ಹೋರ್ಡಿಂಗ್ಸ್, ಪೋಸ್ಟರ್ಸ್, ಬುಕ್‌ಲೆಟ್ ಮತ್ತು ಕ್ಯಾವೆಂಡರ್‌ಗಳಿಗಾಗಿ ಕೇಂದ್ರ ಸರಕಾರ 399 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.
 
ಮೋದಿ ಸರಕಾರ ಮಾಡಿದ ವೆಚ್ಚದ ಮೊತ್ತವು ಕೆಲವು ಪ್ರಮುಖ ಸಚಿವಾಲಯಗಳು ಮತ್ತು ಸರ್ಕಾರದ ಪ್ರಮುಖ ಕಾರ್ಯಕ್ರಮಗಳಿಗೆ ಮೀಸಲಿಡುವ ವಾರ್ಷಿಕ ಬಜೆಟ್‌ಗಿಂತ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ "ಮಾಲಿನ್ಯ ತಗ್ಗಿಸುವಿಕೆಗೆ ಸರಕಾರ ಕಳೆದ ಮೂರು ವರ್ಷಗಳಲ್ಲಿ ಹಂಚಿಕೆ ಕೇವಲ 56.8 ಕೋಟಿ ರೂ.ಮಾತ್ರ ಮೀಸಲಾಗಿಟ್ಟಿತ್ತು.
 
2016 ರಲ್ಲಿ ತನ್ವರ್ ಸಲ್ಲಿಸಿದ ಆರ್‌ಟಿಐ ಅರ್ಜಿಯ ಪ್ರಕಾರ ಮೋದಿ ಸರಕಾರ ಜೂನ್ 1, 2014 ಮತ್ತು ಆಗಸ್ಟ್ 31, 2016 ರ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಜಾಹೀರಾತುಗಳಿಗೆ 1,100 ಕೋಟಿ ರೂ. ವೆಚ್ಚ ಮಾಡಿದೆ.
 
ಕಳೆದ 2015ರಲ್ಲಿ ಪ್ರಧಾನಿ ಮೋದಿಯವರ ಮನ್‌ ಕಿ ಬಾತ್ ರೇಡಿಯೋ ಸಂದೇಶದ ಕಾರ್ಯಕ್ರಮದ ಪ್ರಚಾರಕ್ಕಾಗಿ 8.5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರ್‌ಟಿಐಯಿಂದ ಬಹಿರಂಗವಾಗಿದೆ. 
 
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರಕಾರ 2015 ರಲ್ಲಿ ಸಾಧನೆಗಳ ಜಾಹಿರಾತಿಗಾಗಿ 526 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ವ್ಯಾಪಕವಾಗಿ ಟೀಕಿಸಿದ್ದವು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಕುಟುಂಬಗಳ ನಡುವೆ ಮಾರಾಮಾರಿ