Select Your Language

Notifications

webdunia
webdunia
webdunia
webdunia

ಪಾಕ್ ಗುಪ್ತಚರ ಸಂಸ್ಧೆ ಮಾಡದ್ದನ್ನು ಬಿಜೆಪಿ 3 ವರ್ಷಗಳಲ್ಲಿ ಮಾಡಿದೆ : ಕೇಜ್ರಿವಾಲ್

ಪಾಕ್ ಗುಪ್ತಚರ ಸಂಸ್ಧೆ ಮಾಡದ್ದನ್ನು ಬಿಜೆಪಿ 3 ವರ್ಷಗಳಲ್ಲಿ ಮಾಡಿದೆ : ಕೇಜ್ರಿವಾಲ್
ನವದೆಹಲಿ , ಸೋಮವಾರ, 27 ನವೆಂಬರ್ 2017 (16:56 IST)
ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಸಾಧಿಸದ ಗುರಿಯನ್ನು ಬಿಜೆಪಿ ಕೇವಲ ಮೂರು ವರ್ಷಗಳಲ್ಲಿ ಸಾಧಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಐದನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಹಿಂದು ಮತ್ತು ಮುಸ್ಲಿಮರ ನಡುವೆ ವೈಮನಸ್ಸು ತಂದಿಟ್ಟು ತಮ್ಮ ಗುರಿಯನ್ನು ಸಾಧಿಸಲು ಹವಣಿಸುತ್ತಿದ್ದಾರೆ ಎಂದು ಕಿಡಿಕಾರಿದರು. 
 
ಭಾರತ ದೇಶದಲ್ಲಿ ಹಿಂದು ಮುಸ್ಲಿಮರನ್ನು ಒಡೆಯಬೇಕು ಎನ್ನುವುದು ಪಾಕಿಸ್ತಾನದ ಬಹುದೊಡ್ಡ ಕನಸು.ಅವರು ಐಎಸ್ಐಗೆ ಸೇರಿದ್ದವರಾಗಿದ್ದರಿಂದ ಸಹಜವಾಗಿಯೇ ಭಾರತ ವಿರೋಧಿಯಾಗಿದ್ದಾರೆ. ಆದರೆ, ನಮ್ಮ ದೇಶದಲ್ಲಿಯೇ ದೇಶಭಕ್ತಿಯ ಮುಖವಾಡ ಹೊತ್ತು ದೇಶದ್ರೋಹದ ಕಾಯಕದಲ್ಲಿ ನಿರತರಾಗಿದ್ದಾರೆ. 70 ವರ್ಷಗಳಲ್ಲಿ ಐಎಸ್‌ಐ ಸಾದಿಸದ್ದನ್ನು ಬಿಜೆಪಿ ಕೇವಲ ಮೂರೇ ವರ್ಷಗಳಲ್ಲಿ ಸಾಧಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಸಭೆಯಲ್ಲಿ ಮನೀಶ್ ಸಿಸೋಡಿಯಾ, ಅಶುತೋಶ್, ಗೋಪಾಲ್ ರೈ, ಕುಮಾರ್ ವಿಶ್ವಾಸ ಮತ್ತು ಅತಿಶ್ ಮರ್ಲೆನಾ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಪತಿಗೆ ವಿಡಿಯೋ ರವಾನಿಸಿದ ಕಾಮುಕ