Publish Date: Mon, 27 Nov 2017 (16:42 IST)
Updated Date: Mon, 27 Nov 2017 (16:44 IST)
ಕಳೆದ ಐದು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ 25 ವರ್ಷದ ಯುವಕನನ್ನು ಪೊಲೀಸರು ಶ್ರೀನಿವಾಸಪುರ ಪಟ್ಟಣದಲ್ಲಿ ಬಂಧಿಸಿದ್ದಾರೆ.
ಜಾಖೀರ್ ಖಾನ್ ಮೊಹಲ್ಲಾದ ಆರೋಪಿ ಆರೀಫ್, ತನ್ನ ಇಬ್ಬರು ಸಹಚರರೊಂದಿಗೆ ಐದು ವರ್ಷಗಳ ಹಿಂದೆ ಗಫಾರ್‌ಖಾನ್ ಮೊಹಲ್ಲಾದ 15 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದನು. ಐದು ವರ್ಷಗಳ ನಂತರ ಯುವತಿಯ ವಿವಾಹವಾಗಿತ್ತು. ಮತ್ತೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ ಆರೀಫ್ ವಿಡಿಯೋವನ್ನು ಆಕೆಯ ಪತಿಗೆ ರವಾನಿಸಿದ್ದ ಎನ್ನಲಾಗಿದೆ.
ಆರೋಪಿಗಳು ಮತ್ತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರಿಂದ ಯುವತಿ ಪೋಷಕರೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ನೀಡಿದ್ದಾಳೆ.
ಕಳೆದ 2012 ರಲ್ಲಿ ಆರಿಫ್ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದನು. ಐದು ವರ್ಷಗಳ ನಂತರ ಅದೇ ವಿಡಿಯೋವನ್ನು ಮಹಿಳೆಯ ಪತಿಗೆ ರವಾನಿಸಿದ್ದನು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಪತಿ ಆಕೆಗೆ ವಿಚ್ಚೇದನ ನೀಡಿದ್ದಾನೆ.
ಆರೋಪಿಗಳು ಪರಾರಿಯಾಗಿದ್ದು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಶ್ರೀನಿವಾಸಪುರ ಪೊಲೀಸ್ ಠಾಣೆಯ ಅಧಿಕಾರಿ ಬಿ.ಆರ್.ಜಗದೀಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.