Select Your Language

Notifications

webdunia
webdunia
webdunia
Monday, 7 April 2025
webdunia

ವಿಗ್ರಹ ಕಳ್ಳತನ-6 ಮಂದಿ ಬಂಧನ

Idol theft
ಮೈಸೂರು , ಶನಿವಾರ, 26 ಆಗಸ್ಟ್ 2023 (18:25 IST)
ಬೆಲೆ ಬಾಳುವ ಕಲ್ಲಿನ ವಿಗ್ರಹ ಕಳ್ಳತನಕ್ಕೆ 6 ಮಂದಿ ಯತ್ನಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿರುವ ಘಟನೆ ಮೈಸೂರು ಬೆಂಗಳೂರು ಹೆದ್ದಾರಿಯ ನಾಗನಹಳ್ಳಿ ಗೇಟ್ ಬಳಿ ನಡೆದಿದೆ. ಮೈಸೂರು ಮೇಟಗಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, 2 ಲಕ್ಷ ರೂಪಾಯಿ ಮೌಲ್ಯದ ಒಂದು ಜೊತೆ ಕಲ್ಲಿನ ಆನೆ ವಿಗ್ರಹವನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ಮನೋಜ್, ಕೆ.ಸಚಿನ್, ನಾಗನಹಳ್ಳಿ ನಿವಾಸಿ ಎನ್. ಸಂತೋಷ್ ಕುಮಾರ್, ನಂಜನಗೂಡಿನ ಚಂದ್ರಶೇಖರ ಮೂರ್ತಿ, ಮೆಲ್ಲಹಳ್ಳಿ ಗ್ರಾಮದ ಗೋಪಾಲ್, ಭುಗತಗಳ್ಳಿ ನಿವಾಸಿ ನಾಗೇಶ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಕಸ್ತೂರಿ ನಿವಾಸ ಹೋಟೆಲ್ ಪಕ್ಕದ ಕಲ್ಲಿನ ವಿಗ್ರಹ ತಯಾರಿಸುವ ಕಾರ್ಯಾಗಾರದಿಂದ ಸಾಗಿಸಲು ಯತ್ನಿಸಿದ್ದಾರೆ. ಟಾಟಾ ಜೀಪ್ ವಾಹನಲ್ಲಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಯಾನ-೩ ಯಶಸ್ಸಿಗೆ ಪ್ರಧಾನಿಗಳ ಪ್ರಶಂಸೆ..!