Select Your Language

Notifications

webdunia
webdunia
webdunia
webdunia

ರೌಡಿಗಳ ಪಾಲಿಗೆ ಸಿಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲಂದಂಗಾಯ್ತಾ? ಸಿಸಿಬಿ

crio news
ಒಂದು ಕಾಲದಲ್ಲಿ ಸಿಸಿಬಿ ಅಂದ್ರೆ ರೌಡಿಗಳು ಥರ ಥರ ಅಂತ ನಡುತ್ತಿದ್ರು. ಆದ್ರೆ ಇತ್ತಿಚೇಗೆ ರೌಡಿಗಳಿಗೆ ಸಿಸಿಬಿ ಮೇಲಿನ ಭಯ ಕಡಿಮೆ ಆದಂಗೆ ಕಾಣ್ತಿದೆ. ಯಾಕಂದ್ರೆ ಸಿಸಿಬಿ ಕರೆಸಿ ದಿನವಿಡಿ ಒಬ್ಬ ರೌಡಿ ಶೀಟರ್ ವಿಚಾರಣೆ ನಡೆಸಿ ಬಾಲ ಬಿಚ್ಚಿದ್ರೆ ಕಟ್ ಮಾಡ್ತಿವಿ ಅಂತ ಹೇಳಿದ್ಮೇಲೂ ರೌಡಿಗಳು ಬಾಲ ಬಿಚ್ಚಿದ್ದಾರೆ. ಎಸ್ ಮೊನ್ನೆ ಮೊನ್ನೆ 19ನೇ ತಾರೀಖು ಶನಿವಾರ ಪಾತಕಿ ಬೇಕರಿ ರಘುನಾ ಸಿಸಿಬಿ ಪೊಲೀಸ್ರು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ರು.‌ವಿಚಾರಣೆ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ರು ಮಾರನೇ ದಿನ 20ನೇ ತಾರೀಖು ಭಾನುವಾರ ಇದೇ ಬೇಕರಿ ರಘು ಅಂಡ್ ಸೈಕಲ್ ರವಿ ಉದ್ಯಮಿಯನ್ನ ಕಿಡ್ನಾಪ್ ಮಾಡಿ ಕೊಲೆಗೆ ಯತ್ನಿಸಿದ್ದಾಗಿ ದೂರು ದಾಖಲಾಗಿದೆ. ಉದ್ಯಮಿ ಗಜೇಂದ್ರ ಎಂಬುವವರು ರಾಮಚಂದ್ರಪುರ ಪಾರ್ಕ್ ಬಳಿ ಇದ್ದಾಗ ಮಾರಾಕಸ್ತ್ರ ಜೊತೆಗೆ ಬಂದಿದ್ದ ದುಷ್ಕರ್ಮಿಗಳು ಗಜೇಂದ್ರ ಕೊಲೆಗೆ ಯತ್ನಿಸಿದ್ರಂತೆ. ಸೈಕಲ್ ರವಿ ಮತ್ತು ಬೇಕರಿ ರಘು ಮುಂದೆ ಕಾರಿನಲ್ಲಿದ್ದಾರೆಂದು ಅವರೆ ಕೊಲೆ ಮಾಡಲು ಹೇಳಿದ್ದಾರೆಂದು ಉದ್ಯಮಿ ಗಜೇಂದ್ರ ಕೊಲೆಗೆ ಮುಂದಾಗಿದ್ದಾಗಿ ಗಜೇಂದ್ರ ದೂರು ನೀಡಿದ್ದಾರೆ. ಸದ್ಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಸೈಕಲ್ ರವಿ ಮತ್ತಯ ಬೇಕರಿ ರಘು ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ