Select Your Language

Notifications

webdunia
webdunia
webdunia
webdunia

ಬಸ್ ಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡ್ತಿದ್ದ ಆರೋಪಿಗಳು

laptops
bangalore , ಸೋಮವಾರ, 21 ಆಗಸ್ಟ್ 2023 (19:27 IST)
ಬಸ್ ಗಳಲ್ಲಿ ಲ್ಯಾಪ್ ಟಾಪ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳರಿಬ್ಬರನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.. ಶಬರೀಶ್, ಫಜೀಲ್ ಪಾಷಾ ಬಂಧಿತ ಆರೋಪಿಗಳು.. ಲ್ಯಾಪ್ ಟಾಪ್ ಕಳ್ಳತನವನ್ನೇ ಖಯಾಲಿ ಮಾಡಿಕೊಂಡಿದ್ದ ಕಳ್ಳರನ್ನ ಬಂಧಿಸಿರೋ ಪೊಲೀಸರು ಇಬ್ಬರಿಂದ ಒಂಭತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಬರೋಬ್ಬರಿ 39ಲ್ಯಾಪ್ ಟಾಪ್ ಗಳನ್ನ ಜಪ್ತಿ ಮಾಡಿದ್ದಾರೆ.

ಅಂದ್ಹಾಗೆ ಇಬ್ಬರೂ ಆರೋಪಿಗಳು ಕೂಡ ಆಂಧ್ರ ಮೂಲದೋರು.. ಆಂಧ್ರದಿಂದ ಬೆಂಗಳೂರಿಗೆ ಬಸ್ ಹತ್ತುತ್ತಿದ್ದೋರು ಬೆಂಗಳೂರು ಬಳಿ ಎಲ್ಲಾದ್ರು ಇಳಿದು ವಾಪಸ್ ಹೋಗ್ತಿದ್ರು.. ಅಷ್ಟರಲ್ಲಿ ಲ್ಯಾಪ್ ಟಾಪ್ ಗಳನ್ಬ ಕದ್ದು ಕೈಗೆತ್ತುಕೊಳ್ತಿದ್ರು.. ರಾತ್ರಿ ಜರ್ನಿ ಬಸ್ ಗಳನ್ನೇ ಹತ್ತುತ್ತಿದ್ದ ಆರೋಪಿಗಳು ಹತ್ತಿದ ನಂತರವೇ ಕಂಡಕ್ಟರ್ ಮೂಲಕ ಟಿಕೆಟ್ ತಗೋತಿದಗರು.. ನಂತರ ಬಸ್ ನಲ್ಲಿರೋ ಪ್ರಯಾಣಿಕರ ವಸ್ತುಗಳನ್ನ ಅಬ್ಸರ್ವ್ ಮಾಡ್ತಿದ್ರು.. ಅವ್ರ ಬಳಿ ಲ್ಯಾಪ್ ಟಾಪ್ ಇದ್ರೆ ಅವ್ರ ಮೇಲೆ ಸಂಪೂರ್ಣ ನಿಗಾ ಇಡ್ತಿದ್ರು.. ರಾತ್ರಿ ಜರ್ನೀ ಟೈಮಲ್ಲಿ ಪ್ರಯಾಣಿಕರು ನಿದ್ದೆ ಮಾಡ್ತಿದ್ದನನ್ನ ಗಮನಸಿ ಅವ್ರ ಬಳಿ ಇದ್ದ ಲ್ಯಾಪ್‌ಟಾಪ್ ಗೊತ್ತಿಲ್ದಂಗೆ ತಗೊಂಡು ಖಾಲಿ ಲ್ಯಾಪ್ ಟಾಪ್ ಬ್ಯಾಗ್ ಇಟ್ಟು ಎಸ್ಕೇಪ್ ಆಗ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.

ನ್ನು ಈ ಆರೋಪಿಗಳು ಬರೀ ಕೊಡಿಗೇಹಳ್ಳಿ ಮಾತ್ರ ಅಲ್ಲ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೈಚಳಕ ತೋರಿಸಿರೋದು ಗೊತ್ತಾಗಿದೆ.. ಸದ್ಯ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರನ್ನ ಜೈಲಿಗಟ್ಟಿದ್ದಾರೆ.. ನೀವೇನಾದ್ರು ಬಸ್ ನಲ್ಲಿ ಟ್ರಾವೆಲ್ ಮಾಡ್ಬೇಕಾದ್ರೆ ನಿಮ್ಮ ಬಳಿ ಇರೋ ವಸ್ತುಗಳ ಬಗ್ಗೆ ಗಮನ ಇರ್ಲಿ.. ಕೊಂಚ ಯಾಮಾರಿದ್ರು ಈತರ ನಿಮ್ಮ ವಸ್ತುಗಳನ್ನ ಎಸ್ಕೇಪ್ ಮಾಡ್ತಾರೆ ಹುಷಾರ್.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರದಲ್ಲಿ ಡಿಕೆಶಿ ಕೇರ್‌ಲೆಸ್‌ ವರ್ತನೆ