Select Your Language

Notifications

webdunia
webdunia
webdunia
webdunia

60-70ನೇ ವಯಸ್ಸಲ್ಲಿ ಅಜ್ಜ-ಅಜ್ಜಿ ಮಧ್ಯೆ ಲವ್ ಸ್ಟೋರಿ..!

love story
bangalore , ಸೋಮವಾರ, 21 ಆಗಸ್ಟ್ 2023 (21:06 IST)
ಪ್ರೀತಿಗೆ ಕಣ್ಣಿಲ್ಲ ಅಂತಾ ಅದ್ಯಾರ್ ಹೇಳಿದ್ರೋ.. ಕೆಲವಂದ್ ಸ್ಟೋರಿಗಳನ್ನ ನೋಡಿದ್ರೆ ನಿಜಕ್ಕೂ ಪ್ರೀತಿಗೆ ಕಣ್ಣಿಲ್ಲ ಬಿಡಪ್ಪ ಅನ್ನಿಸ್ದೆ ಇರಲ್ಲ.. ಅಂತಹದ್ದೇ ಒಂದು ಲವ್ ಸ್ಟೋರಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.. ಬೆಂಗಳೂರಿನಲ್ಲಿ 60ವರ್ಷದ ಅಜ್ಜಿ ಮತ್ತು 70ವರ್ಷದ ಅಜ್ಜನ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿದ್ದು ಅವ್ರಿಬ್ರ ನಡುವೆ ಬ್ರೇಕಪ್ ಕೂಡ ಆಗಿ ಕೇಸ್ ಈಗ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಮ್ಮ ಲವ್ ಬ್ರೇಕಪ್ ಸ್ಟೋರಿ ಹೇಳ್ತಿದ್ದಾರಲ್ಲ ಈ ಅಜ್ಜಿ ವಯಸ್ಸು 60 ವರ್ಷ.. ಹೆಸ್ರು ದಯಾಮಣಿ.. ಇನ್ನು ಈ ಫೋಟೋದಲ್ಲಿರೋ ಈ ಅಜ್ಜನ ಹೆಸ್ರು ಲೋಕನಾಥ್ ಅಂತಾ ಕಳೆದ ಐದು ವರ್ಷಗಳ ಹಿಂದೆ ಲೋಕನಾಥ್ ಮತ್ತು ದಯಾಮಣಿ ಇಬ್ಬರ ಮಧ್ಯೆ ಪರಿಚಯ ಆಗಿತ್ತು.. ಪರಿಚಯ ಪ್ರೀತಿಗೆ ತಿರುಗಿ ಕೆಲ ವರ್ಷಗಳ ಕಾಲ ಇಬ್ರೂ ಶಿವಮೊಗ್ಗ, ಮೈಸೂರು, ಬೆಳಗಾವಿ ಅಂತಾ ಕರ್ನಾಟಕದ ಕೆಲ ಊರುಗಳನ್ನ ಸುತ್ತಿ ಪ್ರೀತಿ ಮಾಡಿದ್ರು.. ಇಷ್ಟೆಲ್ಲಾ ಚೆನ್ನಾಗಿರೋ ಲವ್ ಸ್ಟೋರಿಯಲಿ ಈಗ ಬ್ರೇಕಪ್ ಆಗಿದೆ.. ಅದ್ಕೆ ಕಾರಣ ಮದ್ವೆ.. ಹೌದು.. ಮದುವೆ ಆಗಲ್ಲ ಎಂದಿದ್ದಕ್ಕೆ ಅಜ್ಜ ಲೋಕನಾಥ್ ವಿರುದ್ಧ ಮನ ನೊಂದು ದಯಾಮಣಿ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವ್ರಿಬ್ರ ಲವ್ ಬ್ರೇಕಪ್ ಸ್ಟೋರಿನ ಹೇಳ್ತೀವಿ ಕೇಳಿ.. ಈ ಲೋಕನಾಥ್ ಮತ್ತು ದಯಾಮಣಿ ಇಬ್ಬರೂ ಒಂದೇ ಏರಿಯಾದವ್ರು.. ಒಂದೇ ಏರಿಯಾ ಹಿನ್ನೆಲೆ ಪಾರ್ಕ್ ಗೀರ್ಕ್ ಅಂತಾ ಸುತ್ತೋವಾಗ ಇಬ್ರಿಗೆ ಪರಿಚಯ ಆಗಿತ್ತು.. ಆಗ ಶುರುವಾಗಿದ್ದ ಲವ್ ಸ್ಟೋರಿ ಲೋಕನಾಥ್ ಮಗನ ಮದುವೇ ವಿಚಾರದಲ್ಲಿ ಜೋರಾಗಿದೆ.. ಲೋಕನಾಥ್ ಮಗನಿಗೆ ಮೊದಲೇ ಮದುವೆಯಾಗಿ ಡಿವೋರ್ಸ್ ಆಗಿತ್ತು.. ಈ ವಿಚಾರ ದಯಾಮಣಿ ಮುಂದೆ ಹೇಳಿದ್ದ ಲೋಕನಾಥ್ ಮಗನಿಗೆ ಇನ್ನೊಂದು ಮದುವೆ ಮಾಡೋಣ ಹೆಣ್ಣು ಹುಡುಕೋಣ ಅಂತಾ ಹೇಳಿದ್ದ.. ಅದಕ್ಕೆ ದಯಾಮಣಿ ಮುಂದೆ ನಿಂತು ಒಂದು ಹೆಣ್ಣು ಹುಡುಕಿದ್ಳು.. ಮುಂದಿನ ತಿಂಗಳು ಮದ್ವೆ ಕೂಡ ಫಿಕ್ಸ್ ಆಗಿತ್ತು.. ಆದ್ರೆ ಈ ವೇಳೆ ತಾವೂ ಮದುವೆಯಾಗೋಣ ಅಂತಾ ಹೇಳಿದ್ದಾಳೆ..‌ಇದಕ್ಕೆ ಲೋಕನಾಥ್ ಬೇಡ.. ಮಗನ ಮದ್ವೆ ಮಾಡೋಣ.. ನಮ್ಮಿಬ್ಬರಿಗೆ ಮದುವೆ ಬೇಡ ಅಂತಾ ಹೇಳಿದ್ದಾರೆ.. ಅಲ್ಲದೇ ಕೆಲ ದಿನಗಳಿಂದ ಆಕೆಯನ್ನ ಅವೈಡ್ ಕೂಡ ಮಾಡಿದ್ದಾನೆ.. ಇದ್ರಿಂದ ಮನನೊಂದಿರೋ ದಯಾಮಣಿ ಈಗ ಪೂರ್ವ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಈ ಅಜ್ಜ ಅಜ್ಜಿಯ ಡಿಫ್ರೆಂಟ್ ಲವ್ ಸ್ಟೋರಿ ಎಲ್ಲೆಡೆ ವೈರಲ್ ಆಗ್ತಿದ್ದು, ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಈ ವಯಸ್ಸಲ್ಲಿ ಲವ್ ಓಕೆ ಮದ್ವೆ ಯಾಕೆ ಅನ್ನೋದು ಮೋಸ್ಲಿ ಅಜ್ಜನ ವಾದ ಇರ್ಬೇಕು.. ಠಾಣೆ ವರೆಗೂ ಬಂದಿರೋ ಕೇಸ್ ಎಲ್ಲಿಗೆ ಬಂದು ಮುಟ್ಟುತ್ತೆ ಕಾದು ನೋಡಬೇಕು

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ಆರೋಪ; ನಿರ್ದೇಶಕ ಅರೆಸ್ಟ್