Select Your Language

Notifications

webdunia
webdunia
webdunia
webdunia

ಪುಂಡರನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಪುಂಡರನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ತುಮಕೂರು , ಗುರುವಾರ, 24 ಆಗಸ್ಟ್ 2023 (16:50 IST)
ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಮುಂದಾಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಹಲ್ಲೆ ಮಾಡಲು ಮಾರಕಾಸ್ತ್ರಗಳ ಸಹಿತ ಬಂದ ಪುಂಡರನ್ನ ಸ್ವತಃ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಹೊಸಪಾಳ್ಯ ಗ್ರಾಮದ ಬಳಿ ಈ ಘಟನೆ ನಡೆದಿದೆ. ತುಮಕೂರು ಮೂಲದ ಪುಂಡರ ಗುಂಪು ಹೊಸಪಾಳ್ಯ ಯುವಕರಿಗೆ ಥಳಿಸಲು ಸ್ಕೆಚ್ ಹಾಕಿತ್ತು. ಮಾರಕಾಸ್ತ್ರಗಳ ಸಹಿತ ಲಾಂಗು, ಮಚ್ಚು ಹಿಡಿದು ಹಲ್ಲೆ ನಡೆಸಲು ಹೊಂಚು ಹಾಕ್ತಿದ್ದರು. ಇದನ್ನ ಗಮನಿಸಿ ಪುಂಡರನ್ನ ಮಾರಕಾಸ್ತ್ರಗಳ ಸಹಿತ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹೊಸಪಾಳ್ಯ ಗ್ರಾಮಸ್ಥರು ಆ ಪುಂಡರನ್ನು ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಹಲ್ಲೆ‌ ಮಾಡಲು ಯತ್ನಿಸಿದ 6 ಜನ ಪುಂಡರನ್ನ ಚಿಕ್ಕನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಂಡರ ಬಳಿಯಿದ್ದ ಮಚ್ಚು, ಲಾಂಗು, ಸೇರಿದಂತೆ ಹಲವು ಮಾರಕಾಸ್ತ್ರಗಳು ಪೊಲೀಸರ ವಶವಾಗಿವೆ. ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಹುಡುಗಿ ವಿಚಾರಕ್ಕೆ ಹೊಸಪಾಳ್ಯ ಯುವಕರಿಗೆ ಹಲ್ಲೆ ನಡೆಸಲು ಬಂದಿದ್ದರು ಎನ್ನಲಾಗ್ತಿದೆ. ಘಟನೆ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೂ ಟಿಕೆಟ್​​ ಕನ್ಫರ್ಮ್​​ ಇಲ್ಲ