Publish Date: Sun, 06 Aug 2023 (20:03 IST)
Updated Date: Sun, 06 Aug 2023 (20:15 IST)
ಸಿಐಡಿ ಕಚೇರಿ ಮುಂದೆ ರಾತ್ರಿ ಡೆಡ್ಲಿ ಆ್ಯಕ್ಸಿಡೆಂಟ್ ಸಂಭವಿಸಿದೆ.ಎಂಟು ವ್ಹೀಲ್ ನ ಗೂಡ್ಸ್ ಗಾಡಿಯಿಂದ ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದ್ದು,ಫುಟ್ ಪಾತ್ ಮೇಲಿದ್ದ ಪೊಲೀಸ್ ಚೌಕಿಯೇ ಕಿತ್ತೋಗೋವಷ್ಟು ರಭಸದಿಂದ ವಾಹನ ಡಿಕ್ಕಿ ಹೊಡೆದಿದೆ.
ಸಿಐಡಿ ಆಫೀಸ್ ಮುಂದೆ ಇರೋ ಪೊಲೀಸ್ ಚೌಕಿ, ಸಿಗ್ನಲ್ ಎರಡೂ ಕಿತ್ತೋಗಿದೆ.ಪೊಲೀಸ್ ಚೌಕಿ, ಸಿಗ್ನಲ್ ಕಂಬ ಬೀಳಿಸಿ ಚಾಲಕ ಎಸ್ಕೇಪ್ ಆಗಿದ್ದಾನೆ.ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು,ಸದ್ಯ ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ.ಕುಡಿದು ಗಾಡಿ ಓಡಿಸಿರೋ ಶಂಕೆ ವ್ಯಕ್ತವಾಗಿದೆ.ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.