Select Your Language

Notifications

webdunia
webdunia
webdunia
webdunia

ಮಿಡ್ ನೈಟ್ ವೇಳೆ ತಪ್ಪಿದ ಬಾರಿ ಅನಾಹುತ

Mistakes in the middle of the night are a disaster
bangalore , ಸೋಮವಾರ, 10 ಜುಲೈ 2023 (17:09 IST)
ವೀಕೆಂಡ್ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ವೇಳೆ ಕಾರು ಅಪಘಾತ ಮದ್ಯರಾತ್ರಿಯಲ್ಲಿ ಸಂಭವಿಸಿದೆ.ಓವರ್ ಸ್ಪೀಡ್ ಚಾಲನೆಯಿಂದ ರಸ್ತೆಯ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಯುವತಿಯರು, ಓರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಆಡುಗೋಡಿ ಪಾಸ್ ಪೋರ್ಟ್ ಆಫೀಸ್ ರಸ್ತೆಯ ಬಳಿ ಘಟನೆ ನಡೆದಿದೆ.
 
ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಎರಡು ಸೀಟ್ ಗಳ ಏರ್ ಬ್ಯಾಗ್ ಓಪನ್ ಆಗಿದೆ.ಮುಂದೆ ಕುಂತಿದ್ದ ಯುವತಿ, ಯುವಕನಿಗೆ ಗಾಯವಾಗಿಬ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಪಶ್ಚಿಮ‌ ಬಂಗಾಳ ಮೂಲದ ಯುವತಿಯರು, ಯುವಕ ಮಧ್ಯ ಸೇವಿಸಿ, ಕಾರು ಚಾಲನೆ ಮಾಡುತ್ತಿದ್ರು.
 
ಮಧ್ಯದ ನಶೆಯಲ್ಲಿ ಯುವತಿಯರು ತೇಲಾಡ್ತಿದ್ರು.ಸಾರ್ವಜನಿಕರು, ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ .ಕಾರಿನಲ್ಲಿ ಮಧ್ಯದ ಬಾಟಲಿಗಳು ಪತ್ತೆಯಾಗಿದ್ದು,ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿದ್ದಾರೆ.ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಸ್ಥಳದಲ್ಲಿ ಕುಡಿದು ರಂಪಾಟ ಮಾಡ್ತಿದ್ದ ಯುವತಿಯರನ್ನ ಆಟೋ ಹತ್ತಿಸಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನದ ವೇಳೆ ಜೋರು ಮಳೆ