Publish Date: Thu, 24 Aug 2023 (16:26 IST)
Updated Date: Thu, 24 Aug 2023 (16:30 IST)
ಲೋಕಸಭಾ ಚುನಾವಣೆಯಲ್ಲಿ ಯಾರಿಗೂ ಟಿಕೆಟ್ ಕನ್ಪರ್ಮೇಶನ್ ಇಲ್ಲ.. ಚುನಾವಣೆ ಸಂದರ್ಭದಲ್ಲಿ ಸರ್ವೆ ಮಾಡಿಸ್ತೇವೆ, ಆಗ ಟಿಕೆಟ್ ನಿರ್ಧರಿಸ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಅಷ್ಟೇ ಎಂದು ಹೇಳಿದ್ರು. ಇನ್ನು ಚಂದ್ರಯಾನ-3 ಯೋಜನೆ ಸಕ್ಸಸ್ ಆಗಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಚಂದ್ರಯಾನ ಯಶಸ್ವಿಯಾಗಿದೆ.. ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ.. ನಿನ್ನೆ ರಾತ್ರಿಯೇ ಇಸ್ರೋಗೆ ತೆರಳಿ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದ್ರು.. ಚಂದ್ರಯಾನ ಯಾವುದೇ ವ್ಯಕ್ತಿ, ಪಕ್ಷದ ಸಾಧನೆ ಅಲ್ಲ.. ವಿಜ್ಞಾನಿಗಳ ಪರಿಶ್ರಮದ ಸಾಧನೆ ಎಂದು ಬಣ್ಣಿಸಿದ್ರು.