Publish Date: Thu, 24 Aug 2023 (15:33 IST)
Updated Date: Thu, 24 Aug 2023 (16:21 IST)
ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳಿಗೆ ರಾಜ್ಯದ ಪರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದಿಸಿದರು. ಇಸ್ರೋ ವಿಜ್ಞಾನಿಗಳು ಇತಿಹಾಸದ ಪುಟ ಸೇರುವ ಸಾಧನೆ ಮಾಡಿದ್ದಾರೆ. ಇಡೀ ಪ್ರಪಂಚ ಭಾರತೀಯ ವಿಜ್ಞಾನಿಗಳನ್ನು ಹಾಡಿ ಹೊಗಳುತ್ತಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ನೆಹರು ಇಸ್ರೋ ಸಂಸ್ಥೆ ಸ್ಥಾಪನೆ ಮಾಡಿದ್ದರು. ಇಸ್ರೋ ಅಧ್ಯಕ್ಷ ಸೋಮನಾಥ ತಂಡಕ್ಕೆ ಅಭಿನಂದನೆಗಳು ಎಂದು ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.